ಬೀದರ್: ಬೀದರ್‍ನ ಕಾಂಗ್ರೆಸ್ ಮುಖಂಡ ಜಾನಸನ್ ಘೋಡೆ, ಬಿಹಾರದ ಮುಜಾಫರ್‍ಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಜಯೇಂದ್ರ ಚೌಧರಿ ಪರ ಸೋಮವಾರ ವಿವಿಧೆಡೆ ಪ್ರಚಾರ ನಡೆಸಿ ಗಮನ ಸೆಳೆದರು.
ಜಿಲ್ಲೆಯವರೇ ಆದ ಕಾಂಗ್ರೆಸ್ ಕಿಸಾನ್ ವಿಭಾಗದ ರಾಷ್ಟ್ರೀಯ ಜಂಟಿ ಸಂಯೋಜಕ ಜಾನಸನ್ ಘೋಡೆ, ಮುಖಂಡರಾದ ರಾಜರತನ್ ಸಿಂಧೆ, ರತ್ನದೀಪ್ ಕಸ್ತೂರೆ, ಸ್ಥಳೀಯರು ಆದ ಅಕ್ರಂ ಪಾಶಾ, ಶೇಕ್ ಮುಜಮ್ಮಿಲ್ ಮತ್ತಿತರರು ಕ್ಷೇತ್ರದ ಲಕ್ಷ್ಮಿನಗರ, ಬ್ರಹ್ಮಪುರ, ಮೋತಿಜ್ ಮೈದಾನ, ತಿಲಕನಗರದಲ್ಲಿ ಮನೆಗೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಪರ ಮತ ಯಾಚಿಸಿದರು.
ಮುಜಾಫರ್‍ಪುರ ವಿಧಾನಸಭಾ ಕ್ಷೇತ್ರಕ್ಕೆ ನ. 6 ರಂದು ಚುನಾವಣೆ ನಡೆಯಲಿದೆ.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


