ಪಶ್ಚಿಮ ದೆಹಲಿಯ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹಜೀವನ ನಡೆಸುತ್ತಿದ್ದ ಜೋಡಿಯ ಮಧ್ಯೆ ವಿರಸವುಂಟಾಗಿ 35 ವರ್ಷದ ಮಹಿಳೆಯನ್ನು ಗೆಳೆಯ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ರೇಖಾರಾಣಿ ಮೃತ ಮಹಿಳೆ. ಇರಿತದ ಗಾಯಗಳೊಂದಿಗೆ ಆಕೆಯ ಶವ ಗಣೇಶ ನಗರದ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದೆ.ಕೊಲೆ ಆರೋಪದ ಮೇಲೆ ಆಕೆಯ ಗೆಳೆಯ ಮನ್ ಪ್ರೀತ್ ಸಿಂಗ್(45) ಎಂಬಾತನನ್ನು ಪೊಲೀಸರು ಪಂಜಾಬ್ ನಲ್ಲಿ ಬಂಧಿಸಿದ್ದಾರೆ.
ರೇಖಾರಾಣಿ ಮಗಳೊಂದಿಗೆ ವಾಸವಿದ್ದರು. 2015ರಲ್ಲಿ ಸಿಂಗ್ ಪರಿಚಿತನಾಗಿದ್ದ. ಒಟ್ಟಿಗೆ ವಾಸವಿದ್ದರು. ಇತ್ತೀಚೆಗೆ ಸಂಬಂಧ ವಿರಸಕ್ಕೆ ತಿರುಗಿ ಜಗಳವಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಪುತ್ರಿ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz