ತುಮಕೂರಿನಲ್ಲಿ “ಟೈಮ್ಸ್ ಆಫ್ ಇಂಡಿಯಾ” ವರದಿಗಾರರಾಗಿದ್ದ, ಎಸ್. ಭುವನೇಶ್ವರಿ(47) ಅವರು ಇಂದು ಬೆಳಿಗ್ಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಹಾಸನದವರಾದ ಭುವನೇಶ್ವರಿ ಅವರು, ಹಿಂದೂ ಪತ್ರಿಕೆಯ ವರದಿಗಾರರಾಗಿದ್ದು, ಮಹಿಳಾ ಪತ್ರಕರ್ತೆಯಾಗಿ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದರು. ಅವರು ಪತಿ, ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕೆ.ಯು.ಡಬ್ಲ್ಯು.ಜೆ. ಸಂತಾಪ: ಹಿರಿಯ ಪತ್ರಕರ್ತೆ ಭುವನೇಶ್ವರಿ ನಿಧನಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು, ನಿರ್ದೇಶಕರುಗಳ ವತಿಯಿಂದ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಭುವನೇಶ್ವರಿ ಅವರಿಗೆ ವಿದಾಯದ ನಮನಗಳು.


