ಹೆಚ್.ಡಿ.ಕೋಟೆ: ನೂತನ ಪತ್ರಕರ್ತ ಪದಾಧಿಕಾರಿಗಳ ಅಧಿಕಾರದ ಗದ್ದುಗೆಯನ್ನು ನಿಮ್ಮದೇ ಅಧಿಪತ್ಯದಲ್ಲಿ ಸೇವಾ ಕ್ಷೇತ್ರದೊಂದಿಗೆ ಅಧಿಕಾರವನ್ನು ತಾಳ್ಮೆಯಿಂದ ಮಾನಸಿಕ ಸಿದ್ಧತೆಯೊಂದಿಗೆ ಪ್ರತಿಷ್ಠೆಗಳ ಸೋಂಕಿಲ್ಲದೆ ಗೌರವದಿಂದ ಮುನ್ನಡೆಸುವಂತೆ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ನೂತನ ಸಾಲಿನ ಪದಾಧಿಕಾರಿಗಳಿಗೆ ಹಿತವಚನ ನೀಡಿದರು.
ಸಂಘ ಸಂಸ್ಥೆಗಳಲ್ಲಿ ಸದಸ್ಯರೇ ಎಲ್ಲ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲದ ಕಾರಣ ಅದೇ ಪರಿಕಲ್ಪನೆಯಲ್ಲಿ ಸ್ಥಳೀಯ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ನೂತನವಾಗಿ ನೇಮಕ ಮಾಡಲಾಗಿದ್ದು, ಕುಟುಂಬದಲ್ಲಿನ ತಂದೆ ತಾಯಿಗಳಂತೆ ಸ್ಥಾನಗಳನ್ನು ಗೌರವಿಸಬೇಕಿದೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದರು.
ಸ್ಥಳೀಯ ತಾಲೂಕು ಪತ್ರಕರ್ತರ ಸಂಘದ 2026ರಿಂದ2028 ರ ವರೆಗಿನ ಎರಡು ವರ್ಷಗಳ ಅವಧಿಗೆ ನಡೆಸಲಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷರಾಗಿ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಹಿರಿಯರನ್ನು ಗೌರವಿಸುತ್ತಾ ಸರ್ವ ಸದಸ್ಯರನ್ನು ಗಣನೆಗೆ ತೆಗೆದುಕೊಂಡು ಸೇವಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕಿದ್ದು, ಪತ್ರಕರ್ತರ ಭವನದ ನಿವೇಶನಕ್ಕೆ ಶ್ರಮಿಸುವಂತೆ ಹಾಗೂ ಈ ಸಂಬಂಧ ನಾವು ಕೂಡ ನಿಮ್ಮೊಂದಿಗೆ ಸಹಕರಿಸುವುದಾಗಿ ತಿಳಿಸಿದ ಅವರು, ಕಳೆದ ಸಾಲಿನಲ್ಲಿ 64,000 ಗಳಿಂದ ಒಂದು ಲಕ್ಷ ರೂ.ಗಳ ಗಡಿ ದಾಟಿರುವ ಉಳಿತಾಯದ ಮೊತ್ತಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು, ರಾಜಕಾರಣಿಗಳು ಪತ್ರಕರ್ತರನ್ನು ನಿಂದಿಸಿದಲ್ಲಿ ಖಂಡಿಸುವ ಕ್ರಮಕ್ಕೆ ಮುಂದಾಗುವಂತೆ ಹಾಗೂ ಆತ್ಮವಿಮರ್ಶೆಗೆ ಸಲ್ಲದ ಸ್ವಾಭಿಮಾನಕ್ಕೆ ತಲೆಬಾಗದಿರಿ ಎಂದರು.
ತಾಲೂಕು ಸಂಘಗಳು ಜಿಲ್ಲಾ ಸಂಘದ ಅಂಗ ಸಂಸ್ಥೆಯಾಗಿದ್ದು, ಜಿಲ್ಲಾ ಪತ್ರಕರ್ತರ ಸಂಘ ಸರ್ವಾಧಿಕಾರಿಯಾಗಿ ನಡೆಯದೆ, ಪತ್ರಿಕಾ ಕ್ಷೇತ್ರಗಳ ವೃತ್ತಿಯ ಸ್ವರೂಪ ಬದಲಾದಂತೆ ಹೊಸ ಹೊಸ ಸವಾಲುಗಳ ನಡುನಡುವೆಯೂ ಪತ್ರಕರ್ತರ ಕ್ಷೇಮಾಭಿವೃದ್ಧಿಗಾಗಿ ಅವರ ಸುಖ, ದುಃಖ, ಸಾವು, ನೋವು, ಇವೆಲ್ಲವುಗಳಿಗೂ ಕೊಡುಗೆಯ ರೂಪದಲ್ಲಿ ಹಿಂದಿನಿಂದಲೂ ನೀಡುತ್ತಲೇ ಬರುತ್ತಿದ್ದು ಇದೀಗ ಹೆಚ್ಚಿನ ರೂಪದಲ್ಲಿ ನಡೆಯುತ್ತಿದ್ದು ಗ್ರಾಮೀಣ ಮಟ್ಟದ ನಿಮ್ಮೆಲ್ಲರ ಅಧಿಕಾರವನ್ನು ಸೇವಾ ಕ್ಷೇತ್ರಗಳೊಂದಿಗೆ ಬೆಳಗಿಸುವಂತೆ ಕೆ. ದೀಪಕ್ ಕರೆ ನೀಡಿದರು.
ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಾಪುರ ನಾರಾಯಣ ಮಾತನಾಡಿ, ಪತ್ರಕರ್ತರ ಜಾತಿ ನಮ್ಮದು ನಮ್ಮಲ್ಲಿ ತಾರತಮ್ಯ ಸಲ್ಲದು ಸೇವೆಗಳಿಗೆ ಆದ್ಯತೆ ನೀಡಿ ಸಂಘದ ಅಭ್ಯುದಯಕ್ಕೆ ಕಾರಣರಾಗಿರಿ ಎಂದರು.
ಸಮಾರಂಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಚುನಾವಣಾ ಅಧಿಕಾರಿಯಾಗಿದ್ದ ಹಿರಿಯ ಪತ್ರಕರ್ತ ಕಾಶಿನಾಥ್ ಹುಣಸೂರಿನ ಹನಗೋಡು ನಟರಾಜ್ ಪದಾಧಿಕಾರಿಗಳಾದ ಅಧ್ಯಕ್ಷ ನಾಗರಾಂ, ಉಪಾಧ್ಯಕ್ಷ ದೊಡ್ಡ ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿ ನಿಂಗಣ್ಣ, ಕಾರ್ಯದರ್ಶಿ ದಾಸೇಗೌಡ, ಖಜಾಂಚಿ ಜಿ.ರವಿಕುಮಾರ್, ನಿಕಟಪೂರ್ವ ಅಧ್ಯಕ್ಷ ಮಂಜುನಾಥ್, ಖಜಾಂಚಿ ಮಂಜುಕೋಟೆ, ನಿರ್ದೇಶಕರುಗಳಾದ ಸುರೇಶ್,ಚಂದ್ರ, ಪುಟ್ಟರಾಜು, ಹಂಪಾಪುರನಾಗೇಶ, ವಾಸುಕಿನಾಗೇಶ್, ಶರವಣ,ಸದಸ್ಯರುಗಳಾದ ಸಿ.ಎನ್. ರಘು, ಆನಂದ್, ಶ್ರೀನಿಧಿ ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


