ತುಮಕೂರು: ಮಾಧ್ಯಮಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕಾರವಾರ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಇಂದು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಇತ್ತೀಚಿಗೆ ಅಂಕೋಲ ತಾಲ್ಲೂಕಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಒಂದರಲ್ಲಿ ಮಾಧ್ಯಮಗಳ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕೂಡಲೇ ಅವರು ಬೇಷರತ್ ಮತ್ತು ಬಹಿರಂಗವಾಗಿ ರಾಜ್ಯದ ಪತ್ರಕರ್ತರ ಸಮುದಾಯದ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಾಧ್ಯಮಕ್ಕೆ ತನ್ನದೇ ಆದ ಮಹತ್ತರವಾದ ಸ್ಥಾನವಿದ್ದು, ತಮಗೆ ಬೇಕಾದ ಮಾಧ್ಯಮವನ್ನು ಹೊಗಳುವುದು, ಬೇಡವೆನ್ನಿಸಿದಾಗ ತೆಗಳುವುದು ಕೆಲ ರಾಜಕಾರಣಿಗಳಿಗೆ ಪರಿಚಾರವಾಗಿದೆ ಅನಂತ್ ಕುಮಾರ್ ಹೆಗ್ಗಡೆಯವರು ಜವಾಬ್ದಾರಿಯುತ ಸ್ಥಾನದ ಸಂಸದರಾಗಿದ್ದು, ಆಗಿಂದಾಗ್ಗೆ ಮನಸೋ ಇಚ್ಛೆ ತಮ್ಮ ನಾಲಿಗೆಯನ್ನು ಹರಿದು ಬಿಡುತ್ತಿದ್ದಾರೆ. ಇದನ್ನು ಬಿಜೆಪಿ ಪಕ್ಷವು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಮತ್ತು ನಾಲಿಗೆ ಹಿಡಿತವಿಲ್ಲದ ಇಂತಹವರನ್ನು ಸಾರ್ವಜನಿಕ ಚುನಾವಣೆಗಳಿಂದ ಹೊರಗಿಡಬೇಕು ಜೊತೆಗೆ ಇಂತಹವರ ವಿರುದ್ಧ ಕರ್ನಾಟಕ ರಾಜ್ಯ ಸರ್ಕಾರವೂ ಸಹ ಕಠಿಣ ಜರುಗಿಸುವಂತಹ ಕಾಯ್ದೆಯನ್ನು ತರುವುದರೊಂದಿಗೆ ಈ ಘಟನೆಗೆ ಸಂಬಂಧಿಸಿದಂತೆ ಅನಂತ್ ಕುಮಾರ್ ಹೆಗ್ಗಡೆ ವಿರುದ್ಧ ಕ್ರಮ ಜರುಗಿಸಬೇಕು ಎಂದು ಕೆ.ಯು.ಡಬ್ಲ್ಯೂ.ಜೆ ಜಿಲ್ಲಾಧ್ಯಕ್ಷ ಚೀನಿ ಪುರುಷೋತ್ತಮ್ ಆಗ್ರಹಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


