nammatumakuru

    Subscribe to Updates

    Get the latest creative news from FooBar about art, design and business.

    What's Hot

    ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ

    December 12, 2025

    ಬೀದರ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

    December 12, 2025

    ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ

    December 12, 2025
    Facebook Twitter Instagram
    ಟ್ರೆಂಡಿಂಗ್
    • ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ
    • ಬೀದರ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
    • ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ
    • ತುಮಕೂರಿನಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ
    • ಲಂಚ  ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಕಾಯಕ್ತರ ಬಲೆಗೆ!
    • ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಡ್ಡಿ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ
    • ಚಿಕ್ಕನಾಯಕನಹಳ್ಳಿಯಲ್ಲಿ 2,800 ಕೋ.ರೂ. ಯೋಜನೆ ಕಾಮಗಾರಿ ಪ್ರಗತಿ: ಡಿ.ಕೆ.ಶಿವಕುಮಾರ್
    • ತಿಪಟೂರು  | ಡಿಸೆಂಬರ್ 16ರಂದು ಪತ್ರ ಬರಹಗಾರರಿಂದ ಬೆಳಗಾವಿ ಚಲೋ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪತ್ರಕರ್ತರಿಗೆ ಸಾಮಾಜಿಕ ಜಾಲತಾಣಗಳಲ್ಲಿನ  ಅನುಕೂಲಕ್ಕಿಂತ  ಸವಾಲುಗಳೇ ಹೆಚ್ಚು:  ಸುದರ್ಶನ್ ಚನ್ನಂಗಿಹಳ್ಳಿ
    ತುಮಕೂರು January 20, 2025

    ಪತ್ರಕರ್ತರಿಗೆ ಸಾಮಾಜಿಕ ಜಾಲತಾಣಗಳಲ್ಲಿನ  ಅನುಕೂಲಕ್ಕಿಂತ  ಸವಾಲುಗಳೇ ಹೆಚ್ಚು:  ಸುದರ್ಶನ್ ಚನ್ನಂಗಿಹಳ್ಳಿ

    By adminJanuary 20, 2025No Comments3 Mins Read
    tumakur press

    ತುಮಕೂರು: ಪತ್ರಿಕೋದ್ಯಮ ಇಂದು ತಾಂತ್ರಿಕವಾಗಿ ಬಹಳಷ್ಟು ಅಭಿವೃದ್ಧಿ ಹೊಂದಿದ್ದು ಪತ್ರಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿನ  ಅನುಕೂಲಗಳಿಗಿಂತ  ಸವಾಲುಗಳು ಹೆಚ್ಚಾಗಿವೆ ಎಂದು ವಿಜಯಕರ್ನಾಟಕ ದಿನಪತ್ರಿಕೆಯ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಅವರು ತಿಳಿಸಿದರು.

    ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆದ ಎರಡು ದಿನಗಳ ಕರ್ನಾಟಕ ಕಾರ್ಯ ನಿರ್ವಹಿತ ಪತ್ರಕರ್ತರ ಸಂಘದ 39ನೇ ಸಮ್ಮೇಳನದ ‘ಸಾಮಾಜಿಕ ಜಾಲತಾಣ ಮತ್ತು ಪತ್ರಕರ್ತರ ಸವಾಲುಗಳು’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಮೊಬೈಲ್ ಗಳಲ್ಲಿ ಒಂದು ಆಪ್ ಹೇಗೆ ಅಪ್ಡೇಟ್ ಆಗುತ್ತದೆಯೋ ಅದೇ ರೀತಿಯಾಗಿ ತಾಂತ್ರಿಕವಾಗಿ ಇಂದಿನ ಪತ್ರಕರ್ತರು ಬದಲಾವಣೆ ಕಾಣಬೇಕಿದೆ ಪೆನ್ನಿನಲ್ಲಿ ಬರೆಯುವ ಅನೇಕ ಪತ್ರಕರ್ತರು ಇಂದಿನ ಡಿಜಿಟಲ್ ಮಾಧ್ಯಮಕ್ಕೆ ಅನಿವಾರ್ಯವಾಗಿ ಹೊಂದಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಸರ್ಕಾರಿ ಕಚೇರಿಯಲ್ಲಿ ತಾಂತ್ರಿಕ ವ್ಯವಸ್ಥೆಗಳು ಜಾರಿಯಲ್ಲಿವೆ. ಹಾಗೆಯೇ ಇಂದಿನ ಪತ್ರಕರ್ತರು ನವಮಾಧ್ಯಮದ ಅಂತರ್ಯಗಳನ್ನ ಅರಿತುಕೊಂಡು ಪತ್ರಿಕೋದ್ಯಮವನ್ನು ಮುನ್ನಡೆಸಬೇಕು ಎಂದು ತಿಳಿಸಿದರು.


    Provided by
    Provided by

    ಇಂದು AI ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ನಮ್ಮ ಪತ್ರಕರ್ತರ ಕಾರ್ಯವೈಖರಿಗಳನ್ನು ಕಸಿದುಕೊಂಡಿದ್ದು,  ಅನ್ಯ ಭಾಷೆಗಳ ಅಕ್ಷರಗಳನ್ನು ಲೀಲಾಜಾಲವಾಗಿ ಕನ್ನಡಕ್ಕೆ ತರ್ಜುಮೆ ಮಾಡುವ ಸರಳವಾದ ವಿಧಾನವನ್ನು ಕಂಡುಕೊಂಡಿದೆ ಆದರೆ ಇದರಲ್ಲಿನ ಕೆಲ ತಾಂತ್ರಿಕ ದೋಷಗಳನ್ನು ಬದಲಾಯಿಸಿಕೊಳ್ಳಬೇಕು ಆದರೆ ತಾಂತ್ರಿಕತೆ ನಮ್ಮ ಕೆಲಸವನ್ನ ಕಸಿದುಕೊಂಡಿಲ್ಲ ಬದಲಾಗಿ ಬದಲಾವಣೆಯನ್ನು ಕಂಡುಕೊಳ್ಳುವ ಮಾರ್ಗವನ್ನು ತಿಳಿಸಿದೆ. ಆದರೆ ಇದರ ಅನುಕೂಲ ಪಡೆಯುವ ಜೊತೆಗೆ ಇದರಲ್ಲಿಉಂಟಾಗುವ ಅಪಾಯಗಳನ್ನು ಅರಿಯಬೇಕು ಎಂದು ತಿಳಿಸಿದರು.

    ಸುವರ್ಣ ಟಿ.ವಿ. ಸಂಪಾದಕ ಅಜಿತ್ ಹನುಮಕ್ಕ ನವರ್ ಮಾತನಾಡಿ, ಬದಲಾವಣೆ ಶಾಶ್ವತವಾಗಿರುತ್ತದೆ.  ಪತ್ರಿಕೋದ್ಯಮ ಜರ್ನಿ ಖಾಸಗಿಯಲ್ಲ ಹಾಗಾಗಿ,  ಇಂದಿನ ಬದಲಾವಣೆಯು ಹಾಗೆನೆ ಪತ್ರಕರ್ತರು ಪತ್ರಿಕೋದ್ಯಮ ಬಿಟ್ಟು ಬದಲಾದ ಕಾಲಘಟಕ್ಕೆ ಹೊಂದಿಕೊಂಡಿದ್ದಾರೆ ನಾನು ಪತ್ರಕರ್ತನಾಗಲು ಹಲವು ಸಾಹಸ ಮಾಡಿದ್ದೆ. ದೊಡ್ಡ ಪತ್ರಕರ್ತನಾಗಿ ಬೆಳೆಯಬೇಕೆಂಬ ಹಂಬಲ. ಇಂದಿನ ಸ್ಮಾರ್ಟ್ ಫೋನ್ ಸೋಷಿಯಲ್ ಮೀಡಿಯಾ ಇನ್ನೋ ಬದಲಾವಣೆ ಕಾಣಲಿದ್ದು, ತಾಂತ್ರಿಕವಾಗಿ ಹಲವು ಬದಲಾವಣೆ ಬರಲಿದೆ,  ಬದಲಾವಣೆ ವೇಗ ಹೆಚ್ಚಿದೆ ಮಾಧ್ಯಮ ಕ್ಷೇತ್ರದಲ್ಲಿ ಹಲವು ಮಹತ್ತರವಾದ ಬದಲಾವಣೆ ಕಾಣುತ್ತೇವೆ, ಇಂದಿನ ಯುವ ಸಮೂಹ ರೀಲ್ಸ್ ಹುಚ್ಚಿಗೆ ಬಿದ್ದು, ಅವರದೆ ಮಾಧ್ಯಮ ಸೃಷ್ಟಿಸಲು ಹೊರಟಿದೆ ಈ ರೀತಿಯಲ್ಲಿ ಮಾಧ್ಯಮ ಕಾವಲುದಾರಿಯಲ್ಲಿದೆ ಹೀಗಾಗಿ ಬದಲಾವಣೆ ಅತಿ ಮುಖ್ಯವಾಗಿದೆ ಎಂದರು.

    ಗೌರಿ ಅಕ್ಕಿ ಮಾತನಾಡಿ, ಪತ್ರಿಕೋದ್ಯಮ ಸಾಮಾಜಿಕಜಾಲತಾಣ ಸಂಕ್ರಮಣ ಸ್ಥಿತಿಯಲ್ಲಿದೆ. ಕಾಲದಿಂದ ಕಾಲಕ್ಕೆ ಹೊಸದಾದ ಬದಲಾವಣೆ ಕಾಣುವಹಾಗೆ ಮಾಧ್ಯಮ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿದೆ. ಪ್ರಸ್ತುತದಲ್ಲಿ ಮಾಧ್ಯಮದಲ್ಲಿ ಓದುಗನಿಗೆ ಕೇಳುಗನಿಗೆ ಅವನ ಆಯ್ಕೆ ಸ್ವಾತಂತ್ರ್ಯ ಕ್ಕೆ ದಕ್ಕೆಯಾಗದ ಹಾಗೆ ನಡೆದು ಕೊಳ್ಳಬೇಕು.  ಏಕೆಂದರೆ ಅವನು ಸರ್ವಸ್ವಾತಂತ್ರ್ಯ ಹೊಂದಿದ್ದಾನೆ. ಹಾಗಾಗಿ ಇಂದಿನ ಸಾಮಾಜಿಕ ಜಾಲತಾಣ ಪತ್ರಕರ್ತರ ಒಳಿತಿಗೆ ಸುದೀರ್ಘವಾದ ಆಲೋಚನೆ ಮಾಡಬೇಕು. ಇಂದಿನ ಪತ್ರಿಕೆಗಳು ಡಿಜಿಟಲ್ ವಲಯಕ್ಕೆ ಅರ್ನಿವಾಯವಾಗಿ ಬಳಸಬೇಕು ಇದ್ದರಿಂದ ಲಾಭ ಕೂಡಾ ಇದೆ. ಇಂತಹ ನಿಟ್ಟಿನಲ್ಲಿಇದರ ಬಗ್ಗೆ ಚರ್ಚಿಸಲು ಇಂತಹ ಸಮ್ಮೇಳನದ ಗೋಷ್ಠಿಗಳು ಅವಶ್ಯಕ, ಸಾಮಾಜಿಕ ಜಾಲತಾಣವನ್ನು ಪತ್ರಕರ್ತರ ತುಂಬಾ ಮುಖ್ಯವಾಗಿದ್ದು ವೆಬ್, ಯೂಟ್ಯೂಬ್ ನ ವಿಶ್ವಾಸಾರ್ಹತೆ ಸುದ್ದಿ ನೀಡಿ, ಓದುಗರನ್ನ ನೋಡುಗರನ್ನ ಸೆಳೆಯಬಹುದು, ಯಾವುದೇ ವಿಡಿಯೋ ಸುದ್ದಿ ಮಹತ್ವದಾಗಿದ್ದರೆ, ಅದನ್ನ ಸಾಮಾಜಿಕ ಜಾಲತಾಣ ಹಾಕಿ ಗಮನ ಸೆಳೆಸಲು ಧಮ್ ಬೇಕಿದೆ. ಇದನ್ನ ಬಳಸುವಲ್ಲಿ ಸಾಕಷ್ಟು ಸುಧಾರಣೆ ಬೇಕಿದೆ. ಹಾಗಾಗಿ ಇದರ ಸದ್ಬಳಕೆ ಬಗ್ಗೆ ಸಾಕಷ್ಟು ಚರ್ಚೆಗಳು ಬೇಕು. ಇವುಗಳು ಬೇಕಾದಲ್ಲಿ ನಾವು ತುಂಬಾ ಬದಲಾವಣೆ ಬೇಕು ಪ್ರತಿದಿನದ ಹೊಸತನಕ್ಕೆ ಸಾಮಾಜಿಕ ಜಾಲತಾಣ ಬದಲಾವಣೆಗೆ ನಾವು ಪ್ರಸ್ತುತದಲ್ಲಿ ಬದಲಾಗಬೇಕಾಗುತ್ತದೆ, ಸುಧಾರಿಸಿದ ತಾಂತ್ರಿಕ ವ್ಯವಸ್ಥೆ ಗೆ ನಾವು ಬದಲಾಗಬೇಕಿದೆ ಎಂದು ತಿಳಿಸಿದರು.

    ಗೋಷ್ಠಿಯ ಮುಖ್ಯಅತಿಥಿಯಾಗಿಭಾಗವಹಿಸಿದ್ದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಬಿ.ಟಿ.ಮುದ್ದೇಶ್ ಮಾತನಾಡಿ, ನನ್ನ ಹತ್ತು ವರ್ಷದ ಎಲೆಕ್ಟ್ರಾನಿಕ್ ಮೀಡಿಯಾ ಅನುಭದ ಸಾರವೆನಂದರೆ ಪತ್ರಿಕೋದ್ಯಮ ಕವಲು ದಾರಿಯಲ್ಲಿದೆ, ಇದಕ್ಕೆ ಪರಿಹಾರಗಳು ಬೇಕಿದೆ, ಇಂತಹ ಸಮಾವೇಶ ಅವಶ್ಯಕ ವಾಗಿದ್ದು ಚರ್ಚೆಗಳು ನಡೆಯ ಬೇಕಿದೆ, ತಾಂತ್ರಿಕ ವ್ಯವಸ್ಥೆ ಪತ್ರಕರ್ತರನ್ನಇಕ್ಕಟಿಗೆ ಸಿಲುಕಿಸಿದೆ, ದಾವಂತದ ಸುದ್ದಿ ಕಡಿಮೆಯಾಗಬೇಕಿದೆ, ಸಣ್ಣ ಪತ್ರಿಕೆಗಳ ಉಳಿಸುವ ಹೊಣೆಗಾರಿಕೆ ಕಾ.ನಿ.ಪ.ಸಂಘದ ಮೇಲಿದೆ, ಮುದ್ರಣ ಮಾಧ್ಯಮ ಅವನತ್ತಿಯತ್ತ ಹೋಗುತ್ತಿದೆ ಎಂಬ ಮಾತನ್ನ ಸುಳ್ಳು ಮಾಡುವ ಹೊಣೆಗಾರಿಕೆ ನಮ್ಮ ಮೇಲಿದ್ದು, ತಾಂತ್ರಿಕವಾಗಿ ಬೆಳೆದ ಪತ್ರಿಕೋದ್ಯಮದಲ್ಲಿ ನೈಪುಣ್ಯತೆ ಬೇಕಿದೆ, ಸಾಮಾಜಿಕಜಾಲತಾಣ ಪತ್ರಕರ್ತರಿಗೆ ಸವಾಲಾಗಿದೆ, ನಾಗರಿಕ ಪತ್ರಿಕೋದ್ಯಮಕ್ಕೆ ಇಂದಿನ ಪತ್ರಕರ್ತರು ಒಗ್ಗಿಕೊಳ್ಳಬೆಕಿದೆ ಎಂದು ತಿಳಿಸಿದರು.

    ಈ ಗೋಷ್ಠಿಯಲ್ಲಿ ಕಸ್ತೂರಿ ಸಂಪಾದಕರಾದ ಶಾಂತಲಾಧರ್ಮರಾಜ್, ಉದಯವಾಣಿ ಗ್ರೂಪ್ಎಡಿಟರ್ ರವಿಶಂಕರ್ ಕೆ. ಭಟ್, ದಾವಣಗೆರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶಿವಕುಮಾರ್ ಕಣಸೋಗಿ, ರವಿಕುಮಾರ್ ಮಹೇಶಿ, ಹರೀಶ್ ಆಚಾರ್ಯ, ಉಮೇಶ್ ಭಟ್ಚಿದಾನಂದ,  ಪಟೇಲ್ ಮಹಾಂತೇಶ್ ಸೇರಿದಂತೆ ಕಾ.ನಿ.ಪ.ದ ರಾಜ್ಯಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx

    admin
    • Website

    Related Posts

    ಲಂಚ  ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಕಾಯಕ್ತರ ಬಲೆಗೆ!

    December 12, 2025

    ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಡ್ಡಿ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ

    December 12, 2025

    ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು

    December 11, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ

    December 12, 2025

    ತುಮಕೂರು:  ಉದ್ಯೋಗದಾತರ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ಇದರ ಹಿಂದಿನ ಪಾವತಿಗಳನ್ನು ಕ್ರಮಬದ್ಧಗೊಳಿಸಲು ನವೆಂಬರ್ 1ರಿಂದ ಏಪ್ರಿಲ್ 30ರವರೆಗೆ…

    ಬೀದರ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

    December 12, 2025

    ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ

    December 12, 2025

    ತುಮಕೂರಿನಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ

    December 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.