ಕೊರಟಗೆರೆ: ಠಾಣೆಗೆ ಬಂದ ಖಚಿತ ಮಾಹಿತಿ ಆಧಾರದ ಮೇಲೆ ಚನ್ನರಾಯನದುರ್ಗ ಹೋಬಳಿಯ ಕುರಂಕೋಟೆ ಗ್ರಾಮದ ಸಿದ್ದರಾಜುರವರ ಜಮೀನಿನ ಬಳಿ ಇಸ್ಪೀಟು ಆಟದಲ್ಲಿ ತೊಡಗಿದ್ದವರನ್ನು ಬಂಧಿಸಿದ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಸುಮಾರು ಏಳರಿಂದ ಎಂಟು ಜನ ಆರೋಪಿಗಳು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂದು ಗುಂಪು ಗೂಡಿಕೊಂಡು ಜೂಜಾಟವಾಡುತ್ತಿದ್ದವರ ಮೇಲೆ ಶನಿವಾರ ಸಂಜೆ 3 ಗಂಟೆಯ ಸಮಯದಲ್ಲಿ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಅಸಾಮಿಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ ಅಖಾಡದಲ್ಲಿದ್ದ ಮಾಲುಗಳಾದ 10140 ನಗದು ಹಣ, 8 ಮೊಬೈಲ್ ಪೋನ್, 6 ದ್ವಿಚಕ್ರ ವಾಹನನ, 52 ಇಸ್ಪೀಟು ಕಾರ್ಡ್ಸ್, 1 ಪ್ಲಾಸ್ಟಿಕ್ ಪೇಪರ್ ನ್ನು ವಶಪಡಿಸಿಕೊಳ್ಳುವಲ್ಲಿ ಪಿಎಸ್ಐ ಚೇತನ್ ಕುಮಾರ್.ಜಿ ಅವರ ತಂಡ ಸದಸ್ಯರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಾಗಿದ್ದು, ಸಿಪಿಐ ಸುರೇಶ್ ಕೆ. ಹಾಗೂ ಪಿಎಸ್ ಐ ಚೇತನ್ ಕುಮಾರ್ ಜಿ., ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ದಾಳಿಯ ಸಂಧರ್ಭದಲ್ಲಿ ಸಿಬ್ಬಂದಿಎಎಸ್ ಐ ರಾಮಚಂದ್ರಯ್ಯ, ಧರ್ಮಪಾಲ್ ನಾಯಕ್ ಚನ್ನಮಲ್ಲಿಕಾರ್ಜುನ್, ದೊಡ್ಡಲಿಂಗಯ್ಯ ಜಗದೀಶ್, ಮಲ್ಲೇಶ್, ದಯಾನಂದ್ ಗಣೇಶ್ ಹನುಮಂತರಾಯಪ್ಪ ಇತರರು ಪಾಲ್ಗೊಂಡಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz