ಭಾರತೀಯ ವಾಯುಪಡೆಯ ಸಾಫ್ಟ್ ವೇರ್ ಡೆವಲಪ್ ಮೆಂಟ್ ಇನ್‌ಸ್ಟಿಟ್ಯೂಟ್ ನ (ಎಸ್‌ಡಿಐ) ಕಮಾಂಡೆಂಟ್ ಆಗಿ ಏರ್ ವೈಸ್ ಮಾರ್ಷಲ್ ಕೆ. ಎನ್. ಸಂತೋಷ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಂಗಳೂರಿನವರೇ ಆಗಿರುವ ಸಂತೋಷ್ ಅವರು, ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವ್ಯಾಸಂಗ ಮಾಡಿದ್ದರು. ನಂತರ, ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನಲ್ಲಿ ‘ಯುದ್ಧ ನಿರ್ವಹಣೆ ಮತ್ತು ರಕ್ಷಣಾ ಅಧ್ಯಯನ’ದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದರು. ಎಸ್ ಡಿಐನ ಆರಂಭಿಕ ದಿನಗಳಿಂದಲೂ ಸೇವೆ ಸಲ್ಲಿಸುತ್ತಿದ್ದು, ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಯುದ್ಧ ಮುಂಚೂಣಿ ಕೇಂದ್ರದಲ್ಲಿ ಮುಖ್ಯ ಎಂಜಿನಿಯರ್ ಆಗಿ, ವಾಯು ಸೇನಾ ಮುಖ್ಯಾಲಯದಲ್ಲಿ ಎಸ್ ಯು-30 ಯೋಜನಾ ನಿರ್ದೇಶಕರಾಗಿ, ಯುದ್ಧ ಸಂಬಂಧಿತ ನೆಟ್ ವರ್ಕ್ ಪ್ರಧಾನ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಮಾಸ್ಕೋದ ಭಾರತೀಯ ದೂತಾವಾಸದಲ್ಲಿ ವೈಮಾನಿಕ ಸಾಫ್ಟ್ ವೇರ್ ವಿಶೇಷ ತಜ್ಞರಾಗಿಯೂ ಕೆಲಸ ಮಾಡಿದ್ದರು ಎಂದು ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


