ಪಾವಗಡ: . ಪಾವಗಡ ತಾಲೂಕಿನ ಕೆ.ಟಿ. ಹಳ್ಳಿ ಗ್ರಾಮದ ವ್ಯವಸಾಯ ಸೇವಾ ಸಹಕಾರ ಸಂಘದ ಐದು ವರ್ಷದ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಒಟ್ಟು ನಾಲ್ಕು ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಡಿ .ಬಿ .ಲೋಕೇಶ್ ಪಾಳೆಗಾರ್ ಹೊರತುಪಡಿಸಿ ಉಳಿದ ಮೂರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಇದೇ ಸಹಕಾರ ಸಂಘದ ಚುನಾವಣೆಯಲ್ಲಿ ಮಹಿಳಾ ಮೀಸಲು ಕ್ಷೇತ್ರದಿಂದ ಎಂ.ನಾಗವೇಣಿ, ವರಲಕ್ಷ್ಮಿ ಡಿ ಹಾಗೂ ಹಿಂದುಳಿದ ವರ್ಗ ಎ.ಮುದ್ದಯ್ಯ ಮತ್ತು ಹಿಂದುಳಿದ ವರ್ಗ ಬಿ.ಕೆ.ಆರ್. ರಂಗಸ್ವಾಮಿ, ಸಾಲಗಾರರಲ್ಲದ ಕ್ಷೇತ್ರದಲ್ಲಿ ಆರ್.ಎಚ್. ನಾಗರಾಜ್ ಇವರುಗಳು ಆಯ್ಕೆಯಾಗಿರುತ್ತಾರೆ.
ಒಟ್ಟು 12 ಸ್ಥಾನಗಳಿದ್ದು, ಆರು ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿಕೆ 6 ಸ್ಥಾನಗಳಿಗೆ ಫೆಬ್ರವರಿ 9 ನೇ ತಾರೀಕು ಚುನಾವಣೆ ನಡೆಯಲಿದೆ.
ವರದಿ : ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4