ತುಮಕೂರು: ತುಮಕೂರು ಜಿಲ್ಲೆ ಕ್ರೀಡೆಗೆ ಪ್ರಸಿದ್ಧಿಯಾಗಿದೆ. ಈ ಹಿಂದೆ ಜಿಲ್ಲೆಯಿಂದ ಖೋ ಖೋ ಸ್ಪರ್ಧೆಯಲ್ಲಿ 12 ಜನ ಪ್ರತಿನಿಧಿಸುತ್ತಿದ್ದರು. ಕಬಡ್ಡಿ ತಂಡದಲ್ಲಿ ಸಾಧನೆ ಮಾಡಿದ್ದಾರೆ. ತುಮಕೂರಿನಲ್ಲಿ ಕ್ರೀಡೆಗೆ ಇತಿಹಾಸವಿದೆ. ಪ್ರೋತ್ಸಾಹವನ್ನು ನೀಡಲಾಗುತ್ತಿದೆ ಎಂದು ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಗರದ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ, ಅವರು ಮಾತನಾಡಿದರು.
ಕಬಡ್ಡಿ ಆಟದಿಂದ ಮನುಷ್ಯ ಮಾನಸಿಕವಾಗಿ ಮತ್ತು ಶಕ್ತಿಯುತವಾಗಿ ಬೆಳೆಯಲು ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಭಾರತಕ್ಕೆ ಸೀಮಿತವಾಗಿದ್ದ ಕಬ್ಬಡ್ಡಿ ಆಟ ಬಾಂಗ್ಲಾ, ನೇಪಾಳ ತದನಂತೆ ಶ್ರೀಲಂಕಾ ದೇಶಕ್ಕೆ ಪರಿಚಯವಾಯಿತು. ಏಷ್ಯಾನ್ ಗೇಮ್ಸ್ ನಲ್ಲಿ ಕಬ್ಬಡ್ಡಿ ಸೇರಿದೆ. ಈ ಕ್ರೀಡೆಯನ್ನು ಉತ್ತೇಜನ ಮಾಡಬೇಕಿದೆ. ಕ್ರೀಡೆಯ ಜೊತೆಗೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಪಿಯುಸಿ ನಿಮ್ಮ ಜೀವನವನ್ನು ತೀರ್ಮಾನ ಮಾಡುವ ಹಂತ. ಇದು ಜೀವನ ರೂಪಿಸಿಕೊಳ್ಳಲು ಮಹತ್ವ ಘಟ್ಟ. ಕ್ರೀಡೆಯಲ್ಲಿ ಸೋಲು ಮತ್ತು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತವರು ನಿರಾಸೆಯಾಗದೇ ಮುಂದಿನ ಅವಕಾಶಗಳಿಗೆ ಸಿದ್ಧರಾಗಬೇಕು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಿ.ಟಿ.ಶ್ರೀನಿವಾಸ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ್ ಗೌಡ ಮುಂತಾದವರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC