ಹುಟ್ಟು ಹಬ್ಬದ ದಿನದಂದೇ ಚೂಡಿದಾರ್ ನ ಶಾಲ್ ಯಂತ್ರಕ್ಕೆ ಸಿಲುಕಿ ಮಹಿಳೆ ದಾರುಣವಾಗಿ ಮೃತಪಟ್ಟ ಘಟನೆ ಕಾಸರಗೋಡಿನ ಮಂಜೇಶ್ವರ ತೂಮಿನಾಡಿನಲ್ಲಿ ನಡೆದಿದೆ.ಮೃತ ದುರ್ದೈವಿಯನ್ನು ಜಯಶೀಲ (24) ಎಂದು ವರದಿಯಾಗಿದೆ.
ಜಯಶೀಲ ತೂಮಿನಾಡಿನಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬೃಹತ್ ಗ್ರೈಂಡರ್‌ನಲ್ಲಿ ತೆಂಗಿನಕಾಯಿ ಅರೆಯುತ್ತಿದ್ದ ವೇಳೆ ಕೆಳಬದಿಯ ತಿರುಗುವ ಕಬ್ಬಿಣದ ಹಿಡಿಗೆಯಲ್ಲಿ ಆಕೆ ಧರಿಸಿದ್ದ ಚೂಡಿದಾರ್ ನ ಶಾಲ್ ಸಿಲುಕಿಕೊಂಡಿತ್ತು.
ಗಂಭೀರವಾಗಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಬದುಕುಳಿಯಲಿಲ್ಲ. ಒಂದೂವರೆ ವರ್ಷಗಳ ಹಿಂದೆ ಜಯಶೀಲ ಅವರ ಮದುವೆಯಾಗಿತ್ತು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


