ಕಾಗವಾಡ: ಮತಕ್ಷೇತ್ರ ವಿಭಿನ್ನ ಹಾಗೂ ರಾಜಕೀಯಕ್ಕೆ ಸಂಬಂಧಿಸಿದಂತೆ ವಿಶಿಷ್ಟವಾದಂತಹ ಒಂದು ಕ್ಷೇತ್ರವಾಗಿದೆ. ಈ ಕ್ಷೇತ್ರ ವಿರೋಧ ಪಕ್ಷದ ನಾಯಕರಾದಂತಹ ಸಿದ್ದರಾಮಯ್ಯ ಅವರಿಗೆ ಹುಲಿಯ ಬಿರುದು ನೀಡಿರುವಂತಹ ಈ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಅತ್ಯಂತ ಶಕ್ತಿಶಾಲಿಯಾಗಿದೆ.
ಈ ಕ್ಷೇತ್ರವನ್ನು ಕಾಂಗ್ರೆಸ್ ಮಾಯಾ ಮತ್ತು ಕಾಂಗ್ರೆಸ್ ಪಕ್ಷದ ಭದ್ರಬುನಾದಿ ಹಾಕಿರುವಂತಹ ನಿಷ್ಠಾವಂತ ಕಾರ್ಯಕರ್ತ ಓಂ ಪ್ರಕಾಶ್ ಪಾಟೀಲ್ ಇವರು 20 ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷವನ್ನು ಸಂಘಟಿಸುತ್ತಾ ಬಲಗೊಳಿಸುತ್ತಾ ಬಂದಿದ್ದಾರೆ. ಈಗಿನ ಕೆಪಿಸಿಸಿ ಅಧ್ಯಕ್ಷರಾದಂತಹ ಡಿಕೆ ಶಿವಕುಮಾರ್ ಆಗ ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದ ಸಮಯದಲ್ಲಿ ಇವರು ಕಾಗವಾಡ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದರು.
ಇವರ ಕಾಲಾವಧಿಯಲ್ಲಿ 2018 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಗವಾಡ ಮತಕ್ಷೇತ್ರ ಕಾಂಗ್ರೆಸ್ ಮಯವಾಗಿತ್ತು ರೂ.30,000 ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ ವಿಜಯವಾಗಿತ್ತು. ಇದಕ್ಕೆ ಓಂ ಪ್ರಕಾಶ್ ಪಾಟೀಲ್ ಅವರ ಶ್ರಮ ಮತ್ತು ಪಕ್ಷ ಸಂಘಟನೆಯ ತಂತ್ರಗಾರಿಕೆಯ ಕಾರಣ ವಾಗಿತ್ತು. ಅದಾದ ನಂತರ ರಾಜಕೀಯ ಬೆಳವಣಿಗೆಗಳಿಂದಾಗಿ ಕಾಗವಾಡ ಕ್ಷೇತ್ರ ಉಪಚುನಾವಣೆ 2019ರಲ್ಲಿ ಎದುರಿಸುವಂತಹ ಸ್ಥಿತಿ ನಿರ್ಮಾಣವಾಯಿತು.
ಓಂ ಪ್ರಕಾಶ್ ಪಾಟೀಲ್ ಅವರು ನೇತೃತ್ವದಲ್ಲಿ ಕಾರ್ಯನಿರ್ವಹಿಸಿದ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಾಗಿ ಗೆಲುವಿಗಾಗಿ ಹಗಲಿರಲು ಕಾರ್ಯನಿರ್ವಹಿಸಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ 60,000 ಗಳಷ್ಟು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾದರು. 2019ರಲ್ಲಿ ಗ್ರಾಮ ಪಂಚಾಯತ್ ಚುನಾವಣೆಯು ಕೂಡ ಇವರು ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ವಿಜಯಶಾಲಿಗಳಾಗಿ ಮಾಡಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ಕಾಗವಾಡ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ವನ್ನು ಗಟ್ಟಿಗೊಳಿಸುತ್ತಾ ಪ್ರಬಲ ಶಕ್ತಿಯಾಗಿ ನಿರ್ಮಾನ ಮಾಡುತ್ತಿರುವ ಓಂ ಪ್ರಕಾಶ್ ಪಾಟೀಲ್ ಅವರು 2023ರ ಕಾಗವಾಡ ಮತಕ್ಷೇತ್ರಕ್ಕೆ ಅಭ್ಯರ್ಥಿ ಆಕಾಂಕ್ಷಿಯಾಗಿದ್ದಾರೆ. ಇವರು ತಮ್ಮ ರಾಜಕೀಯ ಜೀವನವನ್ನು ನಾಯಕರಾದಂತ ಸಿದ್ದರಾಮಯ್ಯನವರು, ಕೆ ಪಿ ಸಿ ಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಚಿಕ್ಕೋಡಿ ಜಿಲ್ಲಾ ಅಧ್ಯಕ್ಷರಾದ ಲಕ್ಷ್ಮಣ್ ರಾವ್ ಚಿಂಗಳೆ, ಕಾಕಾ ಸಾಹೇಬ್ ಪಾಟೀಲ್, ವೀರ್ ಕುಮಾರ್ ಪಾಟೀಲ್, ಇವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಪಡಿಸುತ್ತಾ ಇದ್ದಾರೆ.
ಕಾಗವಾಡ ಮತಕ್ಷೇತ್ರ ಒಂದು ವಿಶಿಷ್ಟವಾದ ಕ್ಷೇತ್ರ ಈ ಕ್ಷೇತ್ರದಲ್ಲಿ ಸಮುದಾಯ ವಾರ್ ಲೆಕ್ಕ ಹಾಕಿದ್ರೆ ಮತದಾರರ ಸಂಖ್ಯೆ 1,90,000 ಇದ್ದು ಇದರಲ್ಲಿ ಲಿಂಗಾಯತ್ಸ ಮುದಾಯ4೦,೦೦೦, ಕುರುಬ ಸಮುದಾಯ 32,000, ಜೈನ ಸಮುದಾಯ 30,000, ಮರಾಠ ಸಮುದಾಯ 25000, ಎಸ್ ಸಿ ಎಸ್ ಟಿ 30 ಸಾವಿರವರೆಗೆ ಮುಸ್ಲಿಂ ಸಮುದಾಯ 18 ಸಾವಿರ ವರೆಗೆ ಇದು ನಿರ್ಣಾಯಕ ಸಮುದಾಯಗಳು ಬಲಾಬಲವಾಗಿದ್ದು ಇಲ್ಲಿ ಲಿಂಗಾಯತ ಹಾಗೂ ಕುರುಬ ಸಮುದಾಯಗಳು ಯಾರು ಕಡೆ ಒಲಿಯುತ್ತವೆ. ಅವರ ಜಯ ನಿಶ್ಚಿತ ಇಲ್ಲಿ ಒಂದು ಗಮನಿಸಬಹುದಾದಂತ ವಿಷಯವೆಂದರೆ ಕುರುಬ ಸಮುದಾಯ ಬೆಳಗಾವಿ ಜಿಲ್ಲೆಯಲ್ಲಿ ಎಂಟು ಲಕ್ಷ ಮತದಾರರನ್ನು ಹೊಂದಿರುವಂತೆ ಈ ಜಿಲ್ಲೆ ಆದರೆ ಸೂಕ್ತವಾದ ರಾಜಕೀಯ ಪ್ರಾತಿನಿತ್ಯ ಸಿಗದೇ ಇರುವುದು ಕೂಡ ಒಂದು ವಿಷಾದನಿಯವಾಗಿದೆ ಎಂದು ಹಾಲುಮತ ಸಮುದಾಯದ ರಾಜ್ಯಾಧ್ಯಕ್ಷರಾದ ರುದ್ರನ್ನ ಗುಳುಗುಳಿ ಅವರು ತಮ್ಮ ಆಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.
ಈ 18 ಕ್ಷೇತ್ರಗಳಲ್ಲಿ ಅವಕಾಶಗಳ ಇರುವಂತ ಕ್ಷೇತ್ರಗಳನ್ನು ನೋಡಿದರೆ ಅಲ್ಲಿ ಕೂಡ ಸಮುದಾಯದ ನಾಯಕರಗಳ ಅವಕಾಶ ವಂಚಿತರಾಗಿದ್ದಾರೆ ಎಂದು ಸಮುದಾಯ ಅಸಮಾಧಾನ ವ್ಯಕ್ತಪಡಿಸುತ್ತಾ ಇದೆ. ಆದ್ದರಿಂದ ಓಂ ಪ್ರಕಾಶ್ ಪಾಟೀಲ್ ಸಂಘಟನಾತ್ಮಕವಾಗಿ ಪಕ್ಷವನ್ನು ಬಲಪಡಿಸಿದ್ದು ಈ ಕ್ಷೇತ್ರ ಒಂದು ಸಲ ಅವಕಾಶ ನೀಡಬೇಕೆಂದು ಇಲ್ಲಿ ಎಲ್ಲಾ ಸಮುದಾಯಗಳ ಒತ್ತಾಯ ಇದೆ ಕಾಂಗ್ರೆಸ್ ಪಕ್ಷ ಮೂಲ ಕಾಂಗ್ರೆಸ್ ಗರಿಗೆ ಮನ್ನಣೆ ನೀಡಬೇಕೆನ್ನುವುದು ಇಲ್ಲಿ ಕಾರ್ಯಕರ್ತರ ನಿಲುವಾಗಿದೆ. ಪ್ರತಿಸಲ ಹೋಲಿಸಿಗರನ್ನು ಮಾನ್ಯತೆ ನೀಡುತ್ತಿರುವ ಪಕ್ಷ ಈ ಸಲ ಗೆಲ್ಲುವ ಕುದುರೆ ಎಂದೆ ಕರೆಯಲ್ಪಡುವ ಓಂಪ್ರಕಾಶ್ ಪಾಟೀಲ್ ಅವರಿಗೆ ಅವಕಾಶ ಕೊಡಬೇಕೆನ್ನುವುದು ಸ್ಥಳೀಯರ ಈ ಕ್ಷೇತ್ರದ ಜನತೆಯ ಬೇಡಿಕೆಯಾಗಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


