ಬೆಂಗಳೂರು: ವ್ಯಕ್ತಿಯೋರ್ವ ಕೈಕಾಲು ಚೆನ್ನಾಗಿದ್ದರೂ, ಕೈ ಇಲ್ಲದಂತೆ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದು, ವ್ಯಕ್ತಿಯೊಬ್ಬರು ಆತನನ್ನು ತಡೆದು, ಆತನಿಗೆ ಕೈ ಇರುವುದನ್ನು ಬಯಲುಗೊಳಿಸಿ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು ಜಯನಗರದ ಸೌತ್ ಅಂಡ್ ಸರ್ಕಲ್ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎನ್ನುವುದು ತಿಳಿದು ಬಂದಿಲ್ಲ. ಜೊತೆಗೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯನ್ನು ತಡೆದ ವ್ಯಕ್ತಿ ಯಾರು ಎನ್ನುವುದೂ ತಿಳಿದು ಬಂದಿಲ್ಲ.
ಕೈ ಇದ್ದರೂ ಅಂಗವಿಕಲನಂತೆ ನಟಿಸುತ್ತಾ, ಜನರ ಅನುಕಂಪಗಿಟ್ಟಿಸುತ್ತಿದ್ದ ವ್ಯಕ್ತಿಯನ್ನು ತಡೆದ ವ್ಯಕ್ತಿಯೋರ್ವ, ನಿನ್ನ ಕೈ ತೋರಿಸು, ಷರ್ಟ್ ಬಿಚ್ಚು ಎಂದು ಗದರಿ ಬಿಚ್ಚಿಸಿದ್ದು, ಈ ವೇಳೆ ಆತನಿಗೆ ಕೈಗಳಿರುವುದು ಪತ್ತೆಯಾಗಿದೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಜೊತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವರು, “ಕೈಕಾಲು ಚೆನ್ನಾಗಿದ್ದರೂ ದುಡಿದು ತಿನ್ನಬಾರದೇ? ಈ ರೀತಿಯಾಗಿ ಬೀದಿಯಲ್ಲಿ ಭಿಕ್ಷೆ ಬೇಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಕೆಲವರು, “ಸಣ್ಣಪುಟ್ಟ ಭಿಕ್ಷುಕರನ್ನು ಹಿಡಿದು ಬಣ್ಣ ಬಯಲು ಮಾಡುವುದು ದೊಡ್ಡ ಕೆಲಸ ಅಲ್ಲ, ಇಡೀ ದೇಶವನ್ನೇ ಲೂಟಿ ಹೊಡೆಯುತ್ತಿರುವ ಸಂದರ್ಭದಲ್ಲಿ ಹೊಟ್ಟೆ ಪಾಡಿಗಾಗಿ ಈ ರೀತಿಯ ಕೆಲಸ ಮಾಡುವವರು ದೊಡ್ಡ ವಿಷಯವಾಗಿ ಕಾಣುತ್ತಾರೆ. ಹೈಫೈ ಕಚೇರಿಯಲ್ಲಿ ಸುಳ್ಳು ಹೇಳಿ ಭಿಕ್ಷೆ ಬೇಡಿ ಕೋಟಿಗಟ್ಟಲೆ ಸಂಪಾದಿಸುವವರನ್ನು ಮೊದಲು ಹಿಡಿಯಿರಿ ಎಂಬ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy