ಕಲಬುರಗಿ: ನಾಯಿ ಜೀವ ಉಳಿಸುವ ಪ್ರಯತ್ನದಲ್ಲಿ ನಡೆದ ಕಾರು ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ ಬಳಿ ನಡೆದಿದೆ.
ಕಲಬುರಗಿಯ ಮಿಲ್ಲತ್ ನಗರದ ಆಯೇಷಾ(70), ಅಜ್ಮೇರಾ(30), ಜೈನಬ್(2) ಮೃತಪಟ್ಟವರು ಎಂದು ತಿಳಿದು ಬಂದಿದೆ. ಇವರು ಸಂಬಂಧಿಕರ ಮಗಳ ಜಾವಳ ಕಾರ್ಯಕ್ರಮಕ್ಕೆಂದು ಟವೆರಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ.
ಮಹಾರಾಷ್ಟ್ರ ಗಡಿಭಾಗದ ಹೈದ್ರಾ ದರ್ಗಾದಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಾಗಿ ಸಂಭ್ರಮದಲ್ಲಿ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಕಾರು ಗೊಬ್ಬೂರು ಬಳಿ ಬರುತ್ತಿದ್ದಂತೆಯೇ ನಾಯಿಯೊಂದು ಅಡ್ಡ ಬಂದಿದೆ. ನಾಯಿಯ ಪ್ರಾಣ ಉಳಿಸಲು ಕಾರು ಚಾಲಕ ರಸ್ತೆ ಬದಿಗೆ ಕಾರು ಇಳಿಸಿದ್ದಾನೆ. ಚಾಲಕ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಕೆಲವೇ ಕ್ಷಣಗಳಲ್ಲಿ ಕಾರು ರಸ್ತೆ ಬದಿಯ ಕಲ್ಲಿನ ಕಂಬಕ್ಕೆ ಅಪ್ಪಳಿಸಿದ್ದು, ಮೂವರು ಕೊನೆಯುಸಿರೆಳೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW