ತುರುವೇಕೆರೆ: ಹೇಮಾವತಿ ಇಲಾಖೆಯಿಂದ ತುರುವೇಕೆರೆ ಕಲ್ಲೂರು ಕ್ರಾಸ್ ಮಾರ್ಗ ಮಧ್ಯೆ ಇರುವ ಕಲ್ಲೂರ್ ಕ್ರಾಸ್ ಮುಖ್ಯ ರಸ್ತೆಯಿಂದ ಪುರದಪಾಳ್ಯ ಪುರ, ಸಂಪರ್ಕ ರಸ್ತೆಯಾಗಿದ್ದು ಪುರದ ಪಾಳ್ಯದವರೆಗೆ ಸುಮಾರು ಎಂಟುನೂರು ಮೀಟರ್ ಡಾಂಬರೀಕರಣ ಕಾಮಗಾರಿ ನಡೆಯುತ್ತಿದೆ. ಆದರೆ ಕಾಮಕಾರಿಯು ಕಳಪೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಡಾಂಬರನ್ನು ಹಪ್ಪಳದ ರೀತಿಯಲ್ಲಿ ಹೆತ್ತಬಹುದಾಗಿದ್ದು, ಡಾಂಬರೀಕರಣ ಮಾಡುವ ಮೊದಲು ಜಲ್ಲಿಯ ಮೇಲೆ ಸಿಂಪಡಿಸಬೇಕಾದ ಆಯಿಲ್ ಅನ್ನು ಸಿಂಪಡಿಸದೆ ಡಾಂಬರೀಕರಣ ಮಾಡುತ್ತಿದ್ದಾರೆ. ರಸ್ತೆಯ ಅಗಲವನ್ನು ಕಿರಿದು ಮಾಡಿರುದ್ದಾರೆ ಮತ್ತು ಡಾಂಬರನ್ನು ಹಾಕಬೇಕಾದ ದಪ್ಪವನ್ನು ಕೂಡ ಕಡಿಮೆ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಗ್ರಾಮಸ್ಥರುಗಳು ಸಹಾಯಕ ಎಂಜಿನಿಯರ್ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ನೀವೇನು ಇಂಜಿನಿಯರ? ಇಂಜಿನಿಯರ್ ನಾನು ಇದರ ಕ್ವಾಲಿಟಿ ಏನು ಎಂಬುದು ನನಗೆ ಗೊತ್ತಿದೆ ಎಂದು ದರ್ಪದ ಮಾತುಗಳನ್ನಾಡಿದ್ದಾರೆ. ಗುತ್ತಿಗೆದಾರನ ಬಳಿ ಪ್ರಶ್ನಿಸಿದರೆ, ನೀವು ಇಂಜಿನಿಯರ್ ಜೊತೆಗೆ ಮಾತನಾಡಿಕೊಳ್ಳಿ ಎಂದು ಹೇಳಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘ ತುರುವೇಕೆರೆ ತಾಲೂಕು ಅಧ್ಯಕ್ಷರಾದ ತಾಳ್ಕೆರೆ ನಾಗೇಂದ್ರ ಅವರು ಮಾತನಾಡಿ, ಈ ರಸ್ತೆಯ ಕಾಮಗಾರಿಯ ಪ್ರಾರಂಭವಾದಾಗಿನಿಂದಲೂ ಕಳಪೆಯಿಂದ ಕೂಡಿದ್ದು, ರಸ್ತೆಯ ಅಗಲವನ್ನು ಕಡಿಮೆಗೊಳಿಸಿ ಕಾಮಗಾರಿ ನಡೆಸುತ್ತಿದ್ದಾರೆ. ಡಾಂಬರಿನ ಗುಣಮಟ್ಟ ಮತ್ತು ದಪ್ಪವನ್ನು ಕೂಡ ಕಡಿಮೆಗೊಳಿಸಿ ಕೆಲಸ ಮಾಡುತ್ತಿದ್ದಾರೆ. ಈ ಜಾಗದಲ್ಲಿ ಮಳೆಗಾಲದಲ್ಲಿ ಅತೀ ಹೆಚ್ಚು ಮಳೆ ಆಗಲಿದ್ದು, ರಸ್ತೆಯು ಬೇಗನೆ ಹಾಳಾಗುತ್ತದೆ. ಆದುದರಿಂದ ಸಂಬಂಧ ಪಟ್ಟ ಅಧಿಕಾರಿಗಳು ಬಂದು ಇದರ ಬಗ್ಗೆ ಕೂಲಂಕುಶವಾಗಿ ಪರಿಶೀಲನೆ ಮಾಡಿ ಕಾಮಗಾರಿ ನಿರ್ವಹಿಸಬೇಕು. ಇಲ್ಲವಾದಲ್ಲಿ ಮುಂದಿನ ಹೋರಾಟವನ್ನು ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಜಗದೀಶ್, ಧರ್ಮಪಾಲ, ಭಾನುಪ್ರಕಾಶ್, ಗಂಗಾಧರ್, ಪ್ರಕಾಶ್, ಆಕಾಶ್, ಲಿಂಗರಾಜು, ವೆಂಕಟೇಶ್, ಶಂಕರಣ್ಣ, ಮಧು ಮತ್ತಿತರರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy