ತುರುವೇಕೆರೆ: ಹೊನ್ನಾಂಬ ನಾಟಕ ಮಂಡಳಿ ದಂಡಿನಶಿವರ ಮತ್ತು ಯಡಿಯೂರು ಸಾಂಸ್ಕೃತಿಕ ವೇದಿಕೆ, ಮಾಯಸಂದ್ರ ಕಲಾಭಿಮಾನಿ ಬಳಗ ವತಿಯಿಂದ ಭಾನುವಾರ ಸಂಜೆ, ಬಸ್ಟಾಂಡ್ ಸನ್ಮಾನ್ ಹೋಟೆಲ್ ನ ಬಾಣಸಿಗ ಮತ್ತು ಕಲಾವಿದ ಗೋಪಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ವೇಳೆ ಶಿಕ್ಷಕರು ಮತ್ತು ಕಲಾವಿದರಾದ ಪ್ರಕಾಶ್ ಅವರು ಮಾತನಾಡಿ, ನಮ್ಮ ತಾಲೂಕಿನಲ್ಲಿ ಬಡತನದ ಕಲಾವಿದರಿದ್ದಾರೆ,ಆದರೇ ಕಲೆಗೆ ಬಡತನವಿಲ್ಲ, ಎಂಬ ಉದಾಹರಣೆಗೆ ಕಲಾವಿದ ಗೋಪಿಯೇ ಸಾಕ್ಷಿಯಾಗಿದ್ದಾರೆ. ರಾಮಾಯಣ ಎಂಬ ಪೌರಾಣಿಕ ನಾಟಕದಲ್ಲಿ 51ನೇ ಭಾರಿ ಜಟಾಯು ಪಾತ್ರಧಾರಿಯಾಗಿ ಅಭಿನಯಿಸಿದ್ದಾರೆ.ಮತ್ತು ತುರ್ತು ಸಂದರ್ಭಗಳಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದುಶ್ಯಾಸನ ಪಾತ್ರಧಾರಿಯಾಗಿ ಅದ್ಭುತವಾದ ಅಭಿನಯವನ್ನು ಮಾಡಿದ್ದಾರೆ. ತಮ್ಮ ಹೊಟ್ಟೆಪಾಡಿಗಾಗಿ ಬಾಣಸಿಗ ವೃತ್ತಿಯನ್ನು ಮಾಡುತ್ತಾ, ಕಲೆಯ ಬಗ್ಗೆ ಅಪಾರ ಕಾಳಜಿ ಉಳ್ಳವರಾಗಿದ್ದಾರೆ. ಎಷ್ಟು ದೊಡ್ಡ ನಾಟಕವಾದರೂ ಸರಿಯೇ, ಯಾವ ಸ್ಥಳಗಳಲ್ಲಿ ಆದರೂ ಸರಿಯೇ, ತಮ್ಮ ದಿನ ನಿತ್ಯದ ಕೆಲಸ ಕಾರ್ಯಗಳನ್ನು ಮುಗಿಸಿ, ಪೌರಾಣಿಕ ನಾಟಕವನ್ನು ವೀಕ್ಷಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು ಬಹು ಮುಖ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮ್ಮಾನ್ ಹೋಟೆಲ್ ನ ಮಾಲಿಕರಾದ ಸತ್ಯಾನಂದ ರಾವ್, ಡಿ.ಟಿ. ಶ್ರೀನಿವಾಸ್ ಶಿಕ್ಷಕರು, ವೇಗಣ್ಣ ಪೋಸ್ಟ್ ಮಾಸ್ಟರ್, ಸಂತೋಷ್, ಹಿರಿಯ ಮುಖಂಡರಾದ ನಂಜಪ್ಪನವರು ಸೇರಿದಂತೆ ಸನ್ಮಾನ್ ಹೋಟೆಲ್ ಎಲ್ಲಾ ಸಿಬ್ಬಂದಿ, ಗ್ರಾಮಸ್ಥರು, ಮುಂತಾದವರಿದ್ದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5