ತುಮಕೂರು: ನಾಡಿನ ಸಂಸ್ಕೃತಿಯನ್ನು ಭವ್ಯ ಇತಿಹಾಸವನ್ನು ಎತ್ತಿ ಹಿಡಿಯುವಂತಹ ಕೆಲಸವನ್ನು ಮಾಡುತ್ತಿರುವ ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಕಲಾವಿದರನ್ನು ಗುರುತಿಸಿ ಕಲೆಗೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬುದಾಗಿ ಮಾಜಿ ಸಚಿವರಾದ ಡಿ.ಸುಧಾಕರ್ ಹೇಳಿದರು.
ನಗರದ ರೋಟರಿ ಭವನ ನೆಹರು ಮೈದಾನದಲ್ಲಿ ನಡೆದ ದಿ.ಶಂಕರ್ ನಾಗ್ ಅಭಿಮಾನಿಗಳ ಕಲಾವೇದಿಕೆ ಆಯೋಜಿಸಿದ್ದ 66ನೇ ಕನ್ನಡ ರಾಜ್ಯೋತ್ಸವ ಹಾಗೂ ನಟ ಶಂಕರ್ ನಾಗ್ ರವರ 67ನೇ ಹುಟ್ಟುಹಬ್ಬ ಹಾಗೂ ನಟ ಹಿನ್ನಲೆ ಗಾಯಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಸವಿನೆನಪಿನ ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯೂರು ತಾಲ್ಲೂಕಿನ ಮಾಜಿ ಶಾಸಕರಾದ ಡಿ.ಸುಧಾಕರ್ ರವರು ಮಾತನಾಡಿದರು.
ಕಲಾವಿದರಾದ ದಿವು ಶಂಕರ್ ರವರು, ಶಂಕರ್ ನಾಗ್ ರೂಪದಲ್ಲಿ ನಾಡಿನ ಉದ್ದಗಲಕ್ಕೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಭಿನಯ ಮಾಡುವುದರ ಮೂಲಕ ಹೆಸರು ಪಡೆದಿದ್ದಾರೆ. ಕಲಾವಿದರ ಬದುಕು ಹಸನಾಗಬೇಕಾದರೆ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದು ಸುಧಾಕರ್ ತಿಳಿಸಿದರು.