ಮಂಡ್ಯ: ಚಿನ್ನಾಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆಗೆಲಸದ ಮಹಿಳೆಯೊಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.
ಸಾವಿತ್ರಿ ಮಹದೇವ್(45) ಬಂಧಿತ ಮಹಿಳೆಯಾಗಿದ್ದು, ಇತ್ತೀಚೆಗೆ ಹಲಗೂರು, ಮಂಡ್ಯ, ಕೆ.ಎಂ. ದೊಡ್ಡಿ ವ್ಯಾಪ್ತಿಗಳಲ್ಲಿ ಕಳವು ನಡೆದಿತ್ತು. ಈ ಸಂಬಂಧ ಸಬ್ ಇನ್ಸ್ ಪೆಕ್ಟರ್ ರವಿ ಕುಮಾರ್ ಅವರು ತಂಡ ರಚಿಸಿ ತನಿಖೆ ನಡೆಸಿದ್ದು, ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ಮಹಿಳೆಯಿಂದ ಪೊಲೀಸರು 7 ಲಕ್ಷ ರೂ. ಬೆಲೆಬಾಳುವ 123 ಗ್ರಾಮ್ ಚಿನ್ನ ವಶಪಡಿಸಿಕೊಂಡಿದ್ದಾರೆ. ಮಹಿಳೆಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಮಂಡ್ಯ ಜಿಲ್ಲಾ ಪೊಲೀಸ್ ಅಭಿಕ್ಷಕರದ ಯತೀಶ್, DSP ನವೀನ್ ಕುಮಾರ್, ಸಿಪಿಐ ಶ್ರೀಧರ್ ರವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು. ರಿಯಾಜ್ ಪಾಷಾ, ನಾಗೇಂದ್ರ, ಸಿದ್ದರಾಜು, ಜಯಕುಮಾರ್, ಮಹೇಶ್, ಸಿದ್ದೇಗೌಡ, ಮಲ್ಲಿಕಾರ್ಜುನ ಚಳುಕಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ವರದಿ: ಶ್ರೀನಿವಾಸ್ ಮಂಡ್ಯ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


