ಚಿತ್ರದುರ್ಗ: ಕಳೆದು ಹೋಗಿದ್ದ 30 ಸಾವಿರ ರೂಪಾಯಿ ಬೆಲೆಯ ಆಂಡ್ರಾಯ್ಡ್ ಮೊಬೈಲ್ ನ್ನು ಪೊಲೀಸರು ಆಟೋ ಚಾಲಕನಿಗೆ ಹಿಂದಿರುಗಿಸಿದ ಘಟನೆ ಹಿರಿಯೂರು ನಗರ ಪೋಲಿಸ್ ಠಾಣೆಯಲ್ಲಿ ನಡೆದಿದೆ.
ಹಿರಿಯೂರು ತಾಲ್ಲೂಕಿನ ಐಮಂಗಲ ಹೋಬಳಿಯ ಪಾಲವ್ವನಹಳ್ಳಿ ಗ್ರಾಮದ ವಾಸಿ ದಶರಥ ಎಂಬವರು ಆಟೋ ಚಾಲಕರಾಗಿ ಕೆಲಸ ಮಾಡುತ್ತಿದ್ದು ಕಷ್ಟಪಟ್ಟು ಸಂಪಾದಿಸಿದ 30 ಸಾವಿರ ರೂಪಾಯಿಯಲ್ಲಿ ಅಂಡ್ರಾಯ್ಡ್ ಮೊಬೈಲ್ ಖರೀದಿಸಿದ್ದರು. ಆದರೆ, ಬುಧವಾರ ಚಿತ್ರದುರ್ಗ ದಿಂದ ಹಿರಿಯೂರು ನಗರಕ್ಕೆ ಬರುತ್ತಿದ್ದ ವೇಳೆ ಅವರ ಮೊಬೈಲ್ ಕಳೆದು ಹೋಗಿತ್ತು. ಈ ಸಂಬಂಧ ಅವರು ಹಿರಿಯೂರು ನಗರ ಪೋಲಿಸ್ ಠಾಣೆಗೆ ದೂರು ನೀಡಲು ಆಗಮಿಸಿದ್ದಾರೆ. ಈ ವೇಳೆ ಅವರ ಮೊಬೈಲ್ ಪೊಲೀಸರ ವಶದಲ್ಲಿರುವುದು ತಿಳಿದು ಬಂದಿದೆ.
ದಶರಥ ಅವರ ಮೊಬೈಲ್ ಮಹಿಳೆಯೊಬ್ಬರಿಗೆ ಬಿದ್ದು ಸಿಕ್ಕಿತ್ತು. ಅದನ್ನು ಅವರು ಪೊಲೀಸರಿಗೆ ಹಸ್ತಾಂತರಿಸಿದ್ದರು. ಇದರಿಂದಾಗಿ ಮೊಬೈಲ್ ಕಳೆದುಕೊಂಡು ಆತಂಕದಲ್ಲಿದ್ದ ಯುವಕ ನಿಟ್ಟುಸಿರು ಬಿಟ್ಟಿದ್ದು, ದೂರು ದಾಖಲಿಸಲು ಆಗಮಿಸುವ ವೇಳೆಯೇ ತನ್ನ ಮೊಬೈಲ್ ಕೈ ಸೇರಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ತಮ್ಮ ವಶದಲ್ಲಿದ್ದ ಮೊಬೈಲ್ ನ್ನು ಹಿರಿಯೂರು ನಗರ ಪೋಲಿಸ್ ಠಾಣೆಯ ಪೋಲೀಸ್ ಧಫೆದಾರ್ ಸುರೇಶ್ ನಾಯ್ಕ ಅವರು ಎ ಎಸ್ ಐ ಅನಸೂಯಮ್ಮ ಅವರ ನೇತೃತ್ವದಲ್ಲಿ ವಾರಸುದಾರಿನಿಗೆ ಒಪ್ಪಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ದಶರಥ, ಹಿರಿಯೂರು ನಗರ ಪೋಲಿಸ್ ಠಾಣೆಯ ಸುರೇಶ್ ನಾಯ್ಕ ಹಾಗೂ ಅನಸೂಯಮ್ಮ ಅವರಿಗೆ ಹಾಗೂ ಹಿರಿಯೂರು ನಗರ ಪೋಲಿಸ್ ಠಾಣೆಯ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ತಿಳಿಸಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5


