- ಸುರೇಶ್ ಬಾಬು ಎಂ. ತುರುವೇಕೆರೆ
ತುಮಕೂರು: ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಹೋಬಳಿ ವಡವನಗಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲದೇವನಹಳ್ಳಿ ಗ್ರಾಮದ ರೈತ ರಾಜಶೇಖರ್ ಬಿನ್ ರಂಗಪ್ಪ ಅವರ ತೋಟದಲ್ಲಿ ಪ್ರಕೃತಿಯ ವಿಸ್ಮಯ ನಡೆದಿದೆ.
ರಾಜಶೇಖರಯ್ಯ ಅವರಿಗೆ ಸೇರಿದ 80 ಗಿಡ ತೆಂಗಿನ ತೋಟದಲ್ಲಿ ಒಂದು ವಿಸ್ಮಯಕಾರಿ ತೆಂಗಿನ ಮರವಿದೆ. ಈ ತೆಂಗಿನ ಮರ ಸುಮಾರು 20 ವರ್ಷಗಳ ಪ್ರಾಯವಾಗಿದ್ದು, 20 ಅಡಿ ಎತ್ತರಕ್ಕೆ ಬೆಳೆದಿದೆ. ಈ ಮರದ 18 ಅಡಿಯ ಎತ್ತರದಲ್ಲಿ 20 ತೆಂಗಿನ ಸಸಿಗಳು ಬೆಳೆದಿವೆ ಕನಿಷ್ಠ ವೆಂದರೆ ಒಂದು ತೆಂಗಿನ ಮರ ಐದು ವರ್ಷಗಳಿಗೆ ಪಸಲಿಗೆ ಬರುತ್ತದೆ. ಅದೇ ರೀತಿ ಈ ಮೇಲೆ ಬೆಳೆದಿರುವ 20 ತೆಂಗಿನ ಸಸಿಗಳು ಹೊಂಬಾಳೆ ಹೊಡೆದು ತೆಂಗಿನಕಾಯಿ ಬಿಟ್ಟು ಅಚ್ಚರಿ ಮೂಡಿಸಿದೆ. ಈ ಕುತೂಹಲ ಹಾಗೂ ಆಶ್ಚರ್ಯ ತೆಂಗಿನ ಮರವು 8 ವರ್ಷಗಳ ನಂತರ ಬೆಳಕಿಗೆ ಬಂದಿದೆ ಅಂದಿನಿಂದ ಇಲ್ಲಿವರೆಗೂ ಆ ರೈತ ಕುಟುಂಬ ಆ ತೆಂಗಿನ ಮರಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.
ಈ ಬಗ್ಗೆ ನಮ್ಮತುಮಕೂರು ಜೊತೆಗೆ ಮಾತನಾಡಿದ ರೈತ ರಂಗಪ್ಪ ಮಾತನಾಡಿ ಈ ಪ್ರಕೃತಿಯ ವಿಸ್ಮಯದಿಂದ ನಮಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಒಳ್ಳೆಯದೇ ಆಗಿದೆ. ಹಾಗಾಗಿ ಪ್ರತಿ ವಾರವು ನಾವು ಈ ಮರಕ್ಕೆ ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರುಗಳು ಸಹ ಬಂದು ಕಲ್ಪವೃಕ್ಷಕ್ಕೆ ಪೂಜೆಯನ್ನು ಮಾಡಿ ಒಳಿತನ್ನು ಕಂಡಿದ್ದಾರೆ ಎಂದರು.
ಇನ್ನು ಇದೇ ಸ್ಥಳಕ್ಕೆ ಭೇಟಿ ನೀಡಿದ್ದ ತುರುವೇಕೆರೆ ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಆರ್.ಜಯರಾಮ್ ಮಾತನಾಡಿ, ಇದು ಪ್ರಕೃತಿಯ ವಿಸ್ಮಯ. ನಾನು ಈ ಸ್ಥಳಕ್ಕೆ ಎರಡನೇ ಬಾರಿ ಬರುತ್ತಿದ್ದು, ಈ ಪ್ರಕೃತಿಯ ವಿಸ್ಮಯವನ್ನು ನೋಡಿ ಜೊತೆಗೆ ತೋಟದ ಮಾಲೀಕನಿಗೆ ಒಳಿತು ಆಗಿದೆ ಎಂಬುದನ್ನು ತಿಳಿದು ಅಕ್ಕಪಕ್ಕದ ಗ್ರಾಮಸ್ಥರುಗಳು ಈ ತೋಟದ ಕಡೆಗೆ ಧಾವಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪೂಜೆಗಾಗಿ ಬಂದಿದ್ದ ಭಕ್ತನೋರ್ವ ಮಾತನಾಡಿ, ಈ ಪ್ರಕೃತಿಯ ವಿಸ್ಮಯದಿಂದ ಒಳ್ಳೆಯ ಅಭೂತಪೂರ್ವ ಯಶಸ್ಸನ್ನು ಕಂಡಿದ್ದೇನೆ ಹಾಗಾಗಿ ಪ್ರತಿವಾರವೂ ಈ ಸ್ಥಳಕ್ಕೆ ಬಂದು ವೃಕ್ಷ ಪೂಜೆಯನ್ನು ಮಾಡುತ್ತಿದ್ದೇನೆ ಯಾವುದೇ ಕೆಲಸವಿದ್ದರೂ ಮೊದಲಿಗೆ ಇಲ್ಲಿಗೆ ಬಂದು ಪೂಜೆ ಸಲ್ಲಿಸಿ, ನಂತರ ಮುಂದಿನ ಕೆಲಸಕ್ಕೆ ತೆರಳುತ್ತೇನೆ ಎಂದು ತಿಳಿಸಿದರು. ಇಲ್ಲಿಗೆ ಬರುವ ಭಕ್ತಾದಿಗಳು ಪೂಜೆ ಸಲ್ಲಿಸಿ ಯಶಸ್ಸನ್ನು ಕನ್ನಡಿಡುತ್ತಾರೆ ಎಂಬ ಮಾತೆ ಇಲ್ಲಿ ಕಂಡು ಬರುತ್ತಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/EKLI3M1veVt0cQ8xLKb9B1