ಕಲುಷಿತ ನೀರು ಸೇವನೆಯಿಂದ ಕೊಪ್ಪಳ ಹಾಗೂ ರಾಯಚೂರು ಭಾಗಗಳಲ್ಲಿ ಕೆಲವೊಂದು ಸಾವು ಸಂಭವಿಸಿದ್ದು, ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಕುಲುಷಿತ ನೀರು ಸೇವನೆ ವಿಚಾರ ರಾಜ್ಯ ಸರ್ಕಾರಕ್ಕೂ ಕಪ್ಪು ಮಸಿ ಬಳಿಯಲಾರಂಭಿಸಿತ್ತು.
ಇದರ ಎಚ್ಚೆತ್ತ ರಾಜ್ಯ ಸರ್ಕಾರ, ಇದೀಗ ಪ್ರಕರಣದ ತನಿಖೆಗೆ ಮೂರು ಮಂದಿಯ ತಂಡ ರಚಿಸಿದೆ. ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಐಎಎಸ್ ಗ್ರಾಮ ಕುಡಿಯಿವ ನೀರು ಹಾಗೂ ನೈರ್ಮಲ್ಯ ಬೆಂಗಳೂರು ಅಧೀಕ್ಷಕ ಅಭಿಯಂತರಾದ ಚಂದ್ರಹಾಸ್ ಹಾಗೂ ಗ್ರಾಮ ಕುಡಿಯುವ ನೀರು ನೈರ್ಮಲ್ಯದ ರಾಜ್ಯ ತಾಂತ್ರಿಕ ಸಮಾಲೋಚಕರಾದ ಬಿ.ಆರ್.ವೆಂಕಟೇಶ್ ತಂಡ ರಚಿಸಿ, ಪ್ರಕರಣದ ತನಿಖೆಗೆ ವರದಿ ನೀಡುವಂತೆ ಸೂಚಿಸಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


