ಔರಾದ್: ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘ ಔರಾದ ತಾಲೂಕು ಘಟಕ ಪದಾಧಿಕಾರಿಗಳನ್ನು ನಗರದ ಕನ್ನಡ ಭವನದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಿ, ಡಾ.ಚನ್ನಬಸವ ಪಟ್ಟದೇವರ ಜಯಂತಿ ಉತ್ಸವ ಕಾರ್ಯಕ್ರಮ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಸರ್ಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷರು ಪಂಡರಿ ಆಡೆ, ಕಲ್ಯಾಣ ಕರ್ನಾಟಕ ಸರ್ಕಾರಿ ನೌಕರರ ಸಂಘವು 371(ಜೆ) ವಿಶೇಷ ಸ್ಥಾನಮಾನದ ಸಮಸ್ಯೆಗಳು ಎದುರಾದಾಗ ಈ ಭಾಗದ ಎಲ್ಲಾ ಸರ್ಕಾರಿ ನೌಕರರ ಸಮಸ್ಯೆಯನ್ನು ಸಂಘಟನಾತ್ಮಕವಾಗಿ ಪರಿಹಾರ ಕಂಡುಕೊಳ್ಳುವ ಸಂಘವಾಗಿದೆ, ಈ ಭಾಗದ ಶೈಕ್ಷಣಿಕ ಅಭಿವೃದ್ಧಿ ಸೇರಿದಂತೆ ಸಂವಿಧಾನದ ವಿಶೇಷ ಸ್ಥಾನಮಾನದ ಆಶಯ ಈಡೇರಿಸಲು ದುಡಿಯುವ ಸಂಘವಾಗಿದೆ ಎಂದರು.
ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ನೌಕರರ ಬಡ್ತಿ, ವರ್ಗಾವಣೆ ಎಲ್ಲಾ ಆದೇಶಗಳು 371(ಜೆ) ವಿಶೇಷ ಸ್ಥಾನಮಾನ 2013 ರಿಂದಲೂ ಪ್ರತ್ಯೇಕ ಆದೇಶಗಳು ಹೊರ ಬೀಳುತ್ತಿದ್ದು ಸಮಸ್ಯೆಗಳು ಎದುರಾದಾಗ ಅವುಗಳು ಪರಿಹಾರ ಆಗದೆ ಉಳಿಯುತ್ತಿವೆ, ಇಂತಹ ಸಂದರ್ಭ ಎದುರಾದಾಗ ಈ ಭಾಗದ ಸಂಘಟನೆಯ ಅವಶ್ಯಕತೆ ಇದೆ ಎಂದು ಸಂಜುಕುಮಾರ ಮೇತ್ರೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರು ನುಡಿದರು.
ತಾಲೂಕಿನ ಎಲ್ಲಾ ಸರ್ಕಾರಿ ಇಲಾಖೆಯ ಸರ್ಕಾರಿ ನೌಕರರು ಹಾಜರಾಗಿ ತಾಲೂಕ ಅಧ್ಯಕ್ಷರು ಕಾರ್ಯದರ್ಶಿಗಳು ಸೇರಿದಂತೆ ಉಳಿದ ಪದಾಧಿಕಾರಿಗಳ ನೇಮಕಾತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಿದ್ದೂ ರವಿ ಡೋಳೆ ಅವರನ್ನು (ತಾಲೂಕು ಅಧ್ಯಕ್ಷರು), ಲೋಕೇಶ ಕೋಟೆ(ಪ್ರಧಾನ ಕಾರ್ಯದರ್ಶಿ), ಗೋವಿಂದ ಪಾಟೀಲ್ (ಗೌರವ ಸಲಹೆಗಾರರು), ಸಂಜೀವ ರೆಡ್ಡಿ ಖಂದಾಡೆ(ಉಪಾಧ್ಯಕ್ಷರು), ಫಯಾಝ್ ಕೊಳ್ಳುರ(ಉಪಾಧ್ಯಕ್ಷರು), ಸಂಜುಕುಮಾರ ಮುಧಾಳೆ(ಸಂಘಟನಾ ಕಾರ್ಯದರ್ಶಿ), ನಾಗೇಶ ಪಟ್ನೆ( ಸಂಘಟನಾ ಕಾರ್ಯದರ್ಶಿ), ಉಮಾಕಾಂತ ಮೂಗಟೆ(ಸಹ ಕಾರ್ಯದರ್ಶಿ), ಮಿಲಿಂದ ಸೋನಕಾಂಬಳೆ (ಸಹ ಕಾರ್ಯದರ್ಶಿ), ರಾಮ ಮೊರೆ (ನಿರ್ದೇಶಕರು)ರಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಪ್ರಧಾನ ಘಟಕ ನಿರ್ದೇಶಕರು ಗೋಣಿಬಸಪ್ಪ ಜೋಗೆರ, ದಶರಥ ವಾಗ್ಮರೆ, ಭೂಷಣ ಪಾಟೀಲ, ಸುನೀಲ ಜಾಧವ, ಸಂತೋಷ ತಂಬಾಕೆ, ಪ್ರಕಾಶ್ ಬಿರಾದಾರ, ಶಿವಾಜಿ, ನಾಗೇಂದ್ರ ಚಟಗಿರೆ, ಅಮೋಲ ವಾಘಮರೇ, ನರಸಪ್ಪ ಕಾಂಬಳೆ ಸೇರಿದಂತೆ ಎಲ್ಲ ಇಲಾಖೆಯ ಸರ್ಕಾರಿ ನೌಕರರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


