ಶಿರಾ: ಅನ್ನದಾತನ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಜನಸ್ನೇಹಿ ಆಡಳಿತ ನೀಡುವುದೇ ನನ್ನ ಆದ್ಯತೆ, ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ರೀತಿ ಸಾಲ ಸೌಲಭ್ಯ ನೀಡಿ ರೈತರನ್ನು ಆರ್ಥಿಕ ಸದೃಢರನ್ನಾಗಿ ಮಾಡುವುದೇನೆ ನನ್ನ ಗುರಿ ಎಂದು ಕಾಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರದ ಸಂಘದ ನೂತನ ಕೆ.ಎನ್. ಮಂಜುನಾಥ್ ಹೇಳಿದರು.
ಶಿರಾ ತಾಲೂಕಿನ ಕಾಮಗೊಂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಪರಸ್ಪರ ಸಹಕಾರ , ಸೇವಾ ಮನೋಭಾವ ದೊಂದಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಮುನ್ನಡೆಸಿದಾಗ ಸಂಘ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯ. ಸಂಘಕ್ಕೆ ಆಗಮಿಸುವ ರೈತರಿಗೆ ಅತ್ಯಂತ ಗೌರವಪೂರ್ವಕವಾಗಿ ಮಾತನಾಡಿಸುವ ಮೂಲಕ ಉತ್ತಮ ಆಡಳಿತ ನೀಡುವಂತಹ ಪ್ರವೃತ್ತಿಯನ್ನು ಸಿಬ್ಬಂದಿಗಳು ಬೆಳೆಸಿಕೊಳ್ಳಬೇಕು, ಮುಂಗಾರು ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿ ರಸಗೊಬ್ಬರ ವಿತರಣೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಹೇಳಿದರು.
ಉಪಾಧ್ಯಕ್ಷರಾಗಿ ಲತಾ.ಜಿ. ಗುಂಡಪ್ಪ ಅವಿರೋಧ ವಾಗಿ ಆಯ್ಕೆಯಾದರು. ನೂತನ ನಿರ್ದೇಶಕರುಗಳಾದ ಈ. ಶಿವಾನಂದಯ್ಯ, ಆರ್.ಮಂಜುನಾಥ, ಎಸ್.ಎಂ.ದೇವರಾಜು, ಈರ ಮಲಿಯಪ್ಪ, ಕೆ.ಎಂ.ರಾಜಣ್ಣ, ಶ್ರೀ ರಾಮಯ್ಯ, ಲತಮ್ಮ ವಿ.ಎಂ. ಆನಂದಪ್ಪ,ನಾಗರಾಜು, ಎಚ್. ಬಿ. ಶಿವಣ್ಣ, ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಜನಾರ್ಧನ್, ಕಾರ್ಯದರ್ಶಿ ಕೆ.ಗಾಯತ್ರಮ್ಮ, ಚುನಾವಣಾಧಿಕಾರಿ ಬಿ ರೇಣುಕಮ್ಮ, ಹೆಂದೊರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಿ ದೇವಿ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎಸ್. ಗಂಗಾಧರ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎಸ್. ನಾಗರಾಜು, ವಿಎಸ್ಎಸ್ ಎನ್ ಮಾಜಿ ಅಧ್ಯಕ್ಷ ಪಿ.ಎನ್. ಗುಂಡಯ್ಯ, ಸುಧಾಕರ, ಆರ್. ಗುರುಮೂರ್ತಿ, ಮುಖಂಡರಾದ ಆನಂದ್, ಸೋಮಣ್ಣ, ಶ್ರೀಧರ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4