ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದಾರೆ. ಈ ಮೂಲಕ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾಹ್ಯಾರಿಸ್ ಕನಸು ಭಗ್ನಗೊಂಡಿದೆ.
ಡೊನಾಲ್ಡ್ ಟ್ರಂಪ್ 277 ಮತ ಗಳಿಸುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೇರಿದ್ದಾರೆ. ಕಮಲಾ ಹ್ಯಾರಿಸ್ 226 ಮತಗಳಿಸಿ ಪರಾಭವಗೊಂಡಿದ್ದಾರೆ.
ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ 6,155,379 ಮತಗಳು ಚಲಾವಣೆಯಾಗಿದೆ, ಅಂದರೆ ಶೇಕಡಾ 47.2 ರಷ್ಟು ಮತ ಬಿದ್ದಿವೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ 6,52,62,256 ಮತಗಳು ಚಲಾವಣೆ ಆಗಿವೆ. ಅಂದರೆ ಶೇ.51.2 ರಷ್ಟು ಮತ ಚಲಾವಣೆ ಆಗಿದೆ.
ಕಮಲಾ ಹ್ಯಾರಿಸ್ ಅವರು ನ್ಯೂಯಾರ್ಕ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಾರಿ ಮುನ್ನೆಡೆ ಗಳಿಸಿದ್ದಾರೆ. ಬಹುಮತಕ್ಕೆ ಅಗತ್ಯವಾಗಿರುವ ಮತ ಪಡೆಯುವ ನಿಟ್ಟಿನಲ್ಲಿ ಕಮಲಾ ಹ್ಯಾರೀಸ್ ಅವರಿಗಿಂತ ಡೋನಾಲ್ಡ್ ಟ್ರಂಪ್ ಮುನ್ನೆಡೆ ಸಾಧಿಸಿದ್ದು, ಅಧ್ಯಕ್ಷರಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296