ಪರಿಸರ ದಿನಾಚಣೆಗೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮವನ್ನು ವಲಯ ಅರಣ್ಯಾಧಿಕಾರಿಗಳಾದ ದೇವರಾಜ್ ಅವರ ಮಾಗ್ರದರ್ಶನದಲ್ಲಿ ಮತ್ತು ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಕನಕಪುರ ಘಟಕದ ಸಹೋಯೋಗದಲ್ಲಿ ಕನಕಪುರ ತಾಲ್ಲೂಕಿನ ಮುಗ್ಗುರು ವನ್ಯಜೀವಿ ವಲಯದ ಉಯ್ಯಂಬಳ್ಳಿ ದೊಡ್ಡಿ ಕಾಡಂಚಿನ ಪ್ರದೇಶ ಸುತ್ತ ಮುತ್ತ ಸುಮಾರು 300 ಹಣ್ಣಿನ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಜೊತೆಗೆ ಸ್ಥಳೀಯ ಗ್ರಾಮಸ್ಥರಿಗೆ ಪರಿಸರದ ಬಗ್ಗೆ ತಿಳುವಳಿಕೆ ನೀಡಿ ಅರಣ್ಯ ಸಂರಕ್ಷಣೆಯ ಮಹತ್ವ ಮಾನವ ಮತ್ತು ವನ್ಯಜೀವಿ ಸಂಘರ್ಷದ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮಕ್ಕೆ ಸ್ಥಳೀಯ ಸುಮಾರು 50 ಜನ ರೈತರು ಬಾಗವಹಿಸಿ ಗಿಡಗಳನ್ನು ನೇಡುವ ಮೂಲಕ ಅರ್ಥ ಪೂರ್ಣ ಪರಿಸರ ದಿನಾಚರಣೆ ಮಾಡಿದಲ್ಲದೆ ನಾವು ನೆಟ್ಟಿರುವ ಗಿಡಗಳನ್ನು ಸುರಕ್ಷಿತವಾಗಿ ಬೆಳೆಸಿ ಫಲ ಕೊಡುವ ತನಕ ಜೋಪಾನವಾಗಿ ಬೆಳೆಸುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಗಸ್ತು ಅರಣ್ಯ ಪಾಲಕ ಶ್ರೀಕಾಂತ್ ಚಿವಟೆ ಮಾತನಾಡಿ ಅರಣ್ಯ ನಾಶದಿಂದ ಪರಿಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇದೆ ರೀತಿ ಸಾಗಿದರೆ ಮುಂದೆ ಮಾನವ ಮತ್ತು ಪ್ರಾಣಿ ಸಂಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಿಳಿಸಿದರು.
ಕಾರ್ಯಕ್ರಮ ಆಯೋಜಿಸಿದ್ದ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ಕನಕಪುರ ತಾಲ್ಲೂಕು ಘಟಕದ ಅಧ್ಯಕ್ಷ ಶಿವಕುಮಾರ್ ಎಸ್.ಎಸ್ ಮಾತನಾಡಿ ಈ ಬಾಗದ ರೈತರು ಪರಿಸರದ ಬಗ್ಗೆ ಬಹಳ ಕಾಳಜಿ ಹೊಂದಿದ್ದು ವ್ಯವಸಾಯದಲ್ಲು ಕೂಡ ಸಾವಯವ ಪದ್ಧತಿ ಅನುಸರಿಸಿ ಮಾದರಿಯಾಗಿದ್ದಾರೆ, ಮುಂದೆ ಸ್ಥಳೀಯ ರೈತರ ಮತ್ತು ವಿದ್ಯಾರ್ಥಿಗಳ ಜೊತೆಗೂಡಿ ಅರಣ್ಯ ಇಲಾಖೆ ಸಹಯೋಗದೊಂದಿಗೆ 10 ಸಾವಿರ ಗಿಡಗಳನ್ನು ನೆಡುವ ಯೋಜನೆ ಜಾರಿಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


