ತುರುವೇಕೆರೆ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ (ಮೂಲ ಸಂಘಟನೆ) ತಾಲೂಕು ಅಧ್ಯಕ್ಷರಾಗಿ ಕಣಕೂರು ಚಂದ್ರಶೇಖರ್ ರವರು ಆಯ್ಕೆಯಾಗಿದ್ದಾರೆ.
ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಶ್ರೀ ಕ್ಷೇತ್ರ ಕಾಡಸಿದ್ದೇಶ್ವರ ಮಠದಲ್ಲಿ ನಡೆದ ತಾಲೂಕುಗಳ ಅಧ್ಯಕ್ಷರ ಆಯ್ಕೆಯ ಸಭೆಯಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷರಾದ ಮಹದೇವಯ್ಯ ಮತ್ತು ಜಿಲ್ಲಾಧ್ಯಕ್ಷರಾದ ಬಿ.ಆರ್.ಯೋಗೇಶ್ ಗೌಡ ರವರು ಅಧಿಕೃತವಾಗಿ ಆದೇಶ ಪತ್ರ ನೀಡಿದ್ದಾರೆ ಎಂದು ನೂತನ ಅಧ್ಯಕ್ಷರಾದ “ಕಣಕೂರು ಚಂದ್ರಶೇಖರ್ “ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಭೆಯಲ್ಲಿ ಹಾಸನ ಜಿಲ್ಲಾಧ್ಯಕ್ಷರಾದ ರೂಪತಾರ, ತಿಪಟೂರು ತಾಲೂಕು ಅಧ್ಯಕ್ಷರಾದ ಈಶ್ವರ್, ಶಿರಾ ತಾಲೂಕು ಮಹಿಳಾ ಅಧ್ಯಕ್ಷರಾದ ನಾಗರತ್ನ, ತುಮಕೂರು ಗ್ರಾಮಾಂತರ ಅಧ್ಯಕ್ಷರಾದ ನಟರಾಜು ಸೇರಿದಂತೆ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ವಿವಿಧ ತಾಲೂಕುಗಳ ಅಧ್ಯಕ್ಷರುಗಳು ಭಾಗವಹಿಸಿ ನೂತನ ಅಧ್ಯಕ್ಷರಿಗೆ ಅಭಿನಂದಿಸಿ, ಶುಭ ಕೋರಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


