ಬೆಳಗಾವಿ: 2023 ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಖಾನಾಪುರ್ ಮತ್ತೆ 2008ರ ಚುನಾವಣೆ ಫಲಿತಾಂಶವನ್ನು ಪುನರ್ವಾರ್ತೆ ಆಗಲಿದೆ ಎಂದು ಭಾರತೀಯ ಜನತಾ ಪಕ್ಷದ ಮುಖಂಡರಾದ ಜ್ಯೋತಿಬಾ ಪ್ರಹ್ಲಾದ್ ರೆಹಮನಿ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪಂಚಾಯತ್ ಸ್ವರಾಜ್ ಸಮಾಚಾರ ಜೊತೆ ಮಾತನಾಡಿದ ಅವರು ಖಾನಾಪುರ್ ಕ್ಷೇತ್ರ ಭಾರತೀಯ ಜನತಾ ಪಕ್ಷ 2008ರಲ್ಲಿ ಭಾರತೀಯ ಜನತಾ ಪಕ್ಷದ ಮೊದಲ ಬಾರಿಗೆ ಶಾಸಕರು ನೀಡಿರುವಂತಹ ಕ್ಷೇತ್ರ. ಇಲ್ಲಿ ಸಂಘಟಿತವಾಗಿ ನಾವು ಈ ಚುನಾವಣೆಯನ್ನು ಎದುರಿಸಲಿದ್ದೇವೆ. ಈ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಆಕಾಂಕ್ಷಿಗಳಾಗಿ ಎಂಟು ಜನ ಇದ್ದಾರೆ ಅದರಲ್ಲಿ ನಾನು ಕೂಡ ಒಬ್ಬ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದರು.
ಬಿಜೆಪಿ ಆಡಳಿತ ಪಕ್ಷ ಇರುವುದರಿಂದ ಸಹಜವಾಗಿ ಟಿಕೆಟ್ ಆಕಾಂಕ್ಷಿಗಳು ಸಂಖ್ಯೆ ಹೆಚ್ಚಾಗಿದೆ. ನಮ್ಮ ಪಕ್ಷದ ನಾಯಕರುಗಳು ಯಾರಿಗೆ ಬಿ ಫಾರ್ಮ್ ನೀಡುತ್ತಾರೋ ಅವರ ಒಟ್ಟಿಗೆ ನಾವು ಪಕ್ಷದ ಚಿಹ್ನೆ ಹಾಗೂ ದ್ವಜದ ಕೆಳಗಡೆ ನಾವು ಕೆಲಸ ಮಾಡಲಿದ್ದೇವೆ. ಭಾರತೀಯ ಜನತಾ ಪಕ್ಷದ ಮೂಲ ಕಾರ್ಯಕರ್ತರಿಗೆ ಬಿ ಫಾರಂ ನೀಡಬೇಕೆಂದು ಕಾರ್ಯಕರ್ತರ ಪ್ರಬಲ ಆಶವಾಗಿದೆ. 2008 ರಂದು 13ರವರೆಗೆ ನಡೆದ ಅಭಿವೃದ್ಧಿ ಪರ್ವ ಮತ್ತೆ ಖಾನಾಪುರದಲ್ಲಿ ನಾವು ತರ ಬಯಸುತ್ತೇವೆ ಎಂದರು.
ಇಲ್ಲಿ ಜೆಡಿಎಸ್ ಕಾಂಗ್ರೆಸ್ ಹಾಗೂ ಬಿಜೆಪಿ ತ್ರಿಕೋನ ಸ್ಪರ್ಧೆ ಇದೆ ಆದ್ದರಿಂದ ನಮಗೆ ಆಡಳಿತದ ಜನಪರ ಯೋಜನೆಗಳು ಈ ಚುನಾವಣೆಯಲ್ಲಿ ಶ್ರೀರಕ್ಷೆ ಯಗಲಿದೆ ಅಲ್ಲದೆ ನಾನು ಈ ಕ್ಷೇತ್ರವನ್ನು ಬಹಳ ಚಿಕ್ಕವನಾಗಿದ್ದಾಗಿನಿಂದಲೂ ಕ್ಷೇತ್ರದ ಜನತೆಯ ಜೊತೆ ಒಡನಾಟ ಇದೆ. ನಮ್ಮ ತಂದೆ ಅವರು ಶಾಸಕರಾದಾಗಿನಿಂದ ಪ್ರತಿಯೊಂದು ಗ್ರಾಮ ಮುಖಂಡರ ಜೊತೆ ನಮ್ಮ ಸಂಪರ್ಕ ಇದೆ. ನಾನು ಇವರ ಜೊತೆಗೆ ಹಾಗೂ ಪಕ್ಷದ ಕಾರ್ಯಕರ್ತರ ಜೊತೆಗೆ ಈ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷವನ್ನು ಸಂಘಟಿತಗೊಳಿಸಿದ್ದೇನೆ. ನನಗೆ ವಿಶ್ವಾಸವಿದೆ ಈ ಕ್ಷೇತ್ರದ ನಾನು ಒಬ್ಬ ಕೂಡ ಪ್ರಬಲ ಆಕಾಂಕ್ಷಿ ವಾಗಿದ್ದರಿಂದ ನನ್ನ ವರಿಷ್ಠರು ನನ್ನ ಪಕ್ಷದ ನಾಯಕರಗಳು ನನಗೆ ಬೆಂಬಲವಾಗಿ ನಿಲ್ಲಲಿದ್ದಾರೆ ಹಾಗೂ ಈ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಿ ಜಯ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


