ಬೆಂಗಳೂರು: ವಿಧಾನ ಸಭೆಯಲ್ಲಿ ವಾದ ವಿವಾಧಕ್ಕಿಂತ ಹೆಚ್ಚಾಗಿ ಪ್ರತಿಭಟನೆ, ಆಕ್ರೋಷ ವ್ಯಕ್ತಪಡಿಸುವ ಘಟನೆಗಳೆ ಹೆಚ್ಚಾಗಿ ಕಂಡು ಬರುತ್ತಿದ್ದು ಸಚಿವರು ಉತ್ತರಕ್ಕಾಗಿ ಸಮಯ ಕೇಳಿದ್ದಕ್ಕೆ ಅವರ ವಿರುದ್ಧ ವಿಪಕ್ಷ ಸದಸ್ಯರು ಗಲಾಟೆ ಮಾಡಿದ ಪ್ರಕರಣ ವಿಧಾನ ಪರಿಷತ್‌ನಲ್ಲಿ ನಡೆಯಿತು.
ಅಧಿವೇಶನ ಪ್ರಾರಂಭ ಆಗುತ್ತಲೇ, ಗೋವಾಕ್ಕೆ ಎಷ್ಟು ದನ, ಎಮ್ಮೆ ಮಾಂಸ ರಫ್ತಾಗುತ್ತೆ ಅಂತ ಕಾಂಗ್ರೆಸ್ ಸದಸ್ಯ ಹರೀಶ್ ಕುಮಾರ್ ಪ್ರಶ್ನೆ ಕೇಳಿದರು. ಇದಕ್ಕೆ ಸಮಯ ಬೇಕು ಅಂತ ಪಶುಸಂಗೋಪನೆ ಇಲಾಖೆ ಸಚಿವ ಪ್ರಭು ಚೌಹಾಣ್ ಹೇಳಿದರು. ಸಚಿವರ ವರ್ತನೆಗೆ ವಿಪಕ್ಷ ಸದಸ್ಯರು ಕಿಡಿಕಾರಿದರು. ಸಚಿವರು ಹೀಗೆ ಅಂದ್ರೆ ಹೇಗೆ. ಮಾಂಸ ರಪ್ತು ಎಷ್ಟು ಆಗುತ್ತದೆ ಅಂತ ಹೇಳಿಲ್ಲ ಅಂದ್ರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸಚಿವ ಪ್ರಭು ಚೌಹಾಣ್ ಎರಡು, ಮೂರು ಇಲಾಖೆಯಿಂದ ಮಾಹಿತಿ ತರಿಸಬೇಕು. ಹೀಗಾಗಿ ತಡ ಆಗಿದೆ. ಆದಷ್ಟು ಬೇಗ ಉತ್ತರ ಕೊಡಿಸುವುದಾಗಿ ತಿಳಿಸಿದರು. ಬಳಿಕ ಜೆಡಿಎಸ್ ತಿಪ್ಪೇಸ್ವಾಮಿ ಪ್ರಶ್ನೆಗೂ ಸಚಿವರು ಸಮಯ ಕೇಳಿದರು. ಇದಕ್ಕೆ ಜೆಡಿಎಸ್ ಸದಸ್ಯ ಭೋಜೇಗೌಡ ಆಕ್ರೋಶ ವ್ಯಕ್ತಪಡಿಸಿ, 10 ದಿನ ಮುಂಚೆ ಕೊಡ್ತೀವಿ. ಉತ್ತರ ಕೊಡೋಕೆ ಏನು? ಉತ್ತರ ಕೊಡುವ ಯೋಗ್ಯತೆ ಇಲ್ಲದೆ ಇದ್ದರೆ ಹೇಗೆ ಎಂದರು.
ಈ ವೇಳೆ ನಿಮಗೆ ಕನ್ನಡ ಸರಿಯಾಗಿ ಮಾತಾಡೋಕೆ ಬರೋದಿಲ್ಲ ಅಂತ ಪ್ರಭು ಚೌಹಾಣ್‌ಗೆ ಭೋಜೇಗೌಡ ಟೀಕೆ ಮಾಡಿದರು. ಭೋಜೇಗೌಡ ಮಾತಿಗೆ ಪ್ರಭು ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


