ಬೆಳಗಾವಿ: ಕನ್ನಡ ಮಹಿಳಾ ಸಂಘದ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಮಾರ್ಚ್ 19ರಂದು ಬೆಳಗಾವಿಯಲ್ಲಿ ಕನ್ನಡ ಗೀತೆಗಳ ಸ್ಪರ್ಧೆ ರಾಗ ರಂಜನಿ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಟಿಳಕವಾಡಿ 2ನೇ ರೈಲ್ವೆ ಗೇಟ್ ಬಳಿಯ ವರೇರ್ಕರ್ ಸಭಾಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.
ದಾಸರ ಪದಗಳನ್ನು ಹಾಡುವ ಸ್ಪರ್ಧೆ ಇದಾಗಿದ್ದು, ಸ್ಪರ್ಧೆಗೆ 5 ಜನ ಮಹಿಳೆಯರ ಅಥವಾ 5 ಜನ ಪುರುಷರ ಗುಂಪು ಇರಬೇಕು. ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಮಾರ್ಚ್ 17ರ ಒಳಗೆ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು ಎಂದು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಿ:
ಶುಭದಾ ಕೋಟೂಳಕರ – 9902852367
ಸಂಗೀತ ಪಾಟೀಲ -9980070771
ಗೌರಿ ಸರನೋಬತ್ -948139055
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DsJTbZnfQe5FbEJqOlbyUL
ಯೂಟ್ಯೂಬ್ ಚಾನೆಲ್ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


