ಔರಾದ್: ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ತಹಶೀಲ್ದಾರ್ ಮಹೇಶ ಪಾಟೀಲ್ ಮಂಗಳವಾರ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಸೂಚಿಸಿದರಲ್ಲದೇ, ಅನ್ಯ ಭಾಷೆಯಲ್ಲಿರುವುದನ್ನು ತೆರವುಗೊಳಿಸುವಂತೆ ಸೂಚಿಸಿದರು.
ಸರ್ಕಾರ ಕನ್ನಡ ನಾಮಫಲಕ 60% ಕಡ್ಡಾಯವಾಗಿ ಇರಬೇಕೆಂದು ಆದೇಶಿಸಿದರು ಸಹ ಕ್ಯಾರೆ ಎನ್ನದ ಅಂಗಡಿ ಮಾಲೀಕರಿಗೆ ತಹಶೀಲ್ದಾರ್ ಸೇರಿದಂತೆ ಕರವೇ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಅಂಗಡಿಗಳಿಗೆ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಮಹೇಶ್ ಪಾಟೀಲ್, ಸರ್ಕಾರದ ಆದೇಶ ಪ್ರತಿಯೊಬ್ಬರು ಪಾಲಿಸಬೇಕು. 60% ಕನ್ನಡದಲ್ಲಿರುವುದು ಕಡ್ಡಾಯ. ಕಡೆಗಣಿಸಿದರೇ ಅಂಗಡಿ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಪಪಂ ಮುಖ್ಯಾಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದರು. ಈ ಸಂದರ್ಭದಲ್ಲಿ ಕರವೇ ತಾಲೂಕ ಅಧ್ಯಕ್ಷರು ಅನಿಲ ದೇವಕತ್ತೆ, ಕರವೇ ನಗರ ಘಟಕ ಅಧ್ಯಕ್ಷರು ಭೀಮ ಹೇಳವಿ, ಕರವೇ ಉಪಾಧ್ಯಕ್ಷರು ಕೇಶವ ಹಕ್ಕೇ, ಬಸವಕುಮಾರ ಚೌಕಂಪಲ್ಲೆ, ಕಪಿಲ್ ಹತ್ತಾಗಲೆ, ಧರಾಮ್ ಕಾಂಬಳೆ, ಏವನ್ ಕಾಂಬಳೆ, ರಾಹುಲ್ ಹೇಳವಿ, ಅಭಿಷೇಕ್ ಜಾಧವ ಹಾಗೂ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಅರವಿಂದ ಮಲ್ಲೀಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC



