ತಿಪಟೂರು : ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನವನ್ನು ತಿಪಟೂರು ಗಡಿಭಾಗದ ಬಳುವನೇರಲಿನಲ್ಲಿ ಡಿಸೆಂಬರ್ 31ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ.ಸಾ.ಪ ಹೊನ್ನವಳ್ಳಿ ಹೋಬಳಿ ಘಟಕದ ಅಧ್ಯಕ್ಷ ಚನ್ನಬಸಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ದಿನಗಳಲ್ಲಿ ಹೊನ್ನವಳ್ಳಿ ತಾಲ್ಲೂಕು ಕೇಂದ್ರವಾಗಿದ್ದ ಇತಿಹಾಸಗಳನ್ನು ಒಳಗೊಂಡಿದೆ. ಇದಕ್ಕಿಂತ ಹಿಂದೆ ಪಾಳೇಗಾರರು ಹೊನ್ನವಳ್ಳಿಯನ್ನು ಆಳುತ್ತಿದ್ದು, ಆಗಿನ ಕೋಟೆ-ಕೊತ್ತಲನ್ನು ಈಗಲೂ ನೋಡಬಹುದು. ಮುಖ್ಯವಾಗಿ ಇಲ್ಲಿನ ವಿಶಿಷ್ಟವಾದ ಗಂಗಾಪಾಣಿ ಎಳನೀರು ಮೈಸೂರು ದಸರಾಕ್ಕೆ ಕಳುಹಿಸುತ್ತಿದ್ದ ಇತಿಹಾಸವನ್ನು ಹೊಂದಿದೆ ಹಾಗೂ ಇಲ್ಲಿನ ಜನರು ಶಾಂತಿಪ್ರಿಯರು ಸಾಹಿತ್ಯಾಭಿರುಚಿಯನ್ನು ಉಳ್ಳವರು ಅದಕ್ಕಾಗಿಯೇ ಇಲ್ಲಿ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದ್ದ ಇದೇ ಡಿಸೆಂಬರ್ 31ರ ಶನಿವಾರ ಬಳುವನೇರಲಿನಲ್ಲಿ ಹೋನ್ನವಳ್ಳಿ ಹೋಬಳಿ ಮಟ್ಟದ 2ನೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬಳುವನೇರಲು ರಂಗಾಪುರದ ಆರ್.ಕೆ.ಶಿವಶಂರಪ್ಪ ಸಮ್ಮೇಳನಾಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದರು.
ಸಮ್ಮೇಳನವು ದೊಡ್ಡಮೇಟಿಕುರ್ಕೆಯ ಬೂದಾಳು ಮಠದ ಶ್ರೀಶ್ರೀ ಶಶಿಶೇಖರಸಿದ್ದಬಸವ ಮಹಾಸ್ವಾಮೀಜಿಗಳ ನೇತೃತ್ವದದಲ್ಲಿ ಜರುಗಲಿದ್ದು, ಸ್ಥಳೀಯ ಗ್ರಾಮೀಣ ಪ್ರತಿಭೆಗಳ ಕಲೆಗಳು ಸಮ್ಮೇಳನದಲ್ಲಿ ಸಾದರಪಡಿಸಲಾಗುತ್ತದೆ. ಸಮ್ಮೇಳನದಲ್ಲಿ ಕವಿಗೋಷ್ಠಿ, ಸಾಹಿತ್ಯ ಗೋಷ್ಠಿ ಮತ್ತು ಕೃಷಿಗೋಷ್ಠಿ ಇರುತ್ತದೆ ಎಂದು ತಿಳಿಸಿದರು.
ಕೃಷಿಕರಿಗಾಗಿ ಕೃಷಿಗೋಷ್ಟಿ: ಸಿದ್ದಯ್ಯ
ನಮ್ಮದು ಬರಗಾಲದ ಪ್ರದೇಶವೆಂಬ ಹಣೆಪಟ್ಟಿಯನ್ನು ಹೊತ್ತುನಿಂತಿರುವ ಹೊನ್ನವಳ್ಳಿ ಭಾಗದ ಬಳುವನೇರಲಿಗೆ ಶಾಶ್ವತವಾದ ನೀರಾವರಿ ಸೌಭ್ಯವಿಲ್ಲ ಹಾಗೂ ಇಂತಹ ಸ್ಥಳದಲ್ಲಿ ಎಂತಹ ಬೆಳೆಗಳನ್ನು ಬೆಳದರೆ ನಮ್ಮ ಕೈಹಿಡಿಯಲಿದೆ ಎಂಬ ಬಗ್ಗೆ ರೈತಗೋಷ್ಠಿಯಲ್ಲಿ ಚರ್ಚಿಸಲಾಗುತ್ತದೆ ಎಂದು ರೈತಮುಖಂಡ ಹಾಗೂ ಬಳುವನೇರಲು ಗ್ರಾ.ಪಂ ಸದಸ್ಯ ಸಿದ್ದಯ್ಯ ತಿಳಿಸಿದರು.
ತಿಪಟೂರು ಕ.ಸಾ.ಪ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ ರಾಜ್ಯಾಧ್ಯಕ್ಷ ಮಹೇಶ್ ಜೋಷಿ ಮಾತಿನಂತೆ ಕ.ಸಾ.ಪವನ್ನು ಗ್ರಾಮಾಂತರ ಮಟ್ಟಕ್ಕೆ ತಲುಪಿಸಲು ದಿಟ್ಟಹೆಜ್ಜೆಯನ್ನು ಇಡುತ್ತಿದೇವೆಂದು ತಿಳಿಸಿದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz