ಅಂಗಡಿ, ಕಂಪನಿ ಹಾಗೂ ಇತರೆ ವಾಣಿಜ್ಯ ಮಳಿಗೆಗಳ ಮೇಲೆ ಅಳವಡಿಸುವ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಬಿಬಿಎಂಪಿ 20,977 ನೋಟಿಸ್ ಜಾರಿ ಮಾಡಿದೆ.
‘ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಬಳಸದಿದ್ದರೆ ಅಂತಹವರಿಗೆ ತಿಳಿವಳಿಕೆ ಪತ್ರ ನೀಡಬೇಕು. ಫೆಬ್ರವರಿ 28ರೊಳಗೆ ನಾಮಫಲಕಗಳಲ್ಲಿ ಕಾನೂನಿನಂತೆ ಕನ್ನಡ ಬಳಸಲು ಸೂಚಿಸಬೇಕು’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸೂಚಿಸಿದರು.


