ತುಮಕೂರಿನಲ್ಲಿ ಗುರುವಾರ ನಡೆದ ಬಾಣಂತಿ ಮತ್ತು ಶಿಶುಗಳ ಸಾವಿಗೆ ಸಂಬಂಧ ಪಟ್ಟಂತೆ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ ವೈದ್ಯ ಹಾಗೂ ನರ್ಸ್ ಗಳನ್ನು ತನಿಖೆ ಆಗುವವರಿಗೂ ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಮತ್ತೆ ಅದೇ ಆದೇಶ ಪ್ರತಿಯಲ್ಲಿ ಜೀವನ ಭತ್ಯೆಗಾಗಿ ಖಾಲಿಯಿರುವ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಕಣ್ಣೊರಿಸುವ ನಾಟಕವಾಡುತ್ತಿದ್ದೆಯಾ ತುಮಕೂರು ಜಿಲ್ಲಾ ಆಸ್ಪತ್ರೆ ಅನ್ನೋ ಪ್ರಶ್ನೆಗಳಿಗೆ ಕಾರಣವಾಗಿದೆ.
ದಿನಾಂಕ: 02.11.2022 ರಂದು, ಜಿಲ್ಲಾ ಆಸ್ಪತ್ರೆ ತುಮಕೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಈ ಕೆಳಕಂಡ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರು, ಹಾಗೂ ಶುಶ್ರೂಷಾಧಿಕಾರಿಗಳು ಕರ್ತವ್ಯ ಲೋಪ ಹಾಗೂ ದುರ್ನಡತೆ ತೋರಿಸಿರುವುದರಿಂದ, ಇವರುಗಳ ವಿರುದ್ಧ. ಇಲಾಖಾ ವಿಚಾರಣೆ ಬಾಕಿ ಇರಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ. ಹಾಗೂ ಇವರುಗಳ ಅಮಾನತ್ತಿನ ಅವಧಿಯಲ್ಲಿ ಜೀವನಾಂಶ, ಭತ್ಯೆ ಪಡೆಯುವ ಸಲುವಾಗಿ ಲೀನ್ ನನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತುಮಕೂರು ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸ್ಥಳಾಂತರಿಸಿದೆ.
ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರು ಡಾ.ಉಷಾ ಎ.ಆರ್. ಹಾಗೂ ಶುಶ್ರೂಷಾಧಿಕಾರಿಗಳಾದ ಸವಿತ, ದಿವ್ಯ ಭಾರತಿ, ಯಶೋಧ ಬಿ.ವೈ. ಅಮಾನತ್ತುಗೊಂಡಿರುವವರಾಗಿದ್ದಾರೆ.
ಕರ್ನಾಟಕ ರಾಜ್ಯವು ಸಾರ್ವಜನಿಕ ಆರೋಗ್ಯ ಪದ್ಧತಿಯಲ್ಲಿ ಇದುವರೆವಿಗೂ ರೋಗಿಗಳಿಗೆ ತಾಯಿ ಕಾರ್ಡ್, ಆಧಾರ ಕಾರ್ಡ, ಪಡಿತರ ಚೀಟಿ ಇಲ್ಲದೆಯೂ ಆರೋಗ್ಯ ಸೇವೆಗಳನ್ನು ನೀಡುತ್ತಾ ಬಂದಿದೆ. ತುರ್ತು ಆರೋಗ್ಯ ಸೇವೆಯನ್ನು ನೀಡುವ ಸಂದರ್ಭದಲ್ಲಿ ಯಾವುದೇ ದಾಖಲೆಗಳು ಅವಶ್ಯವಿರುವುದಿಲ್ಲ.
ರೋಗಿಯು ಯಾವುದೇ ದಾಖಲೆಯು ಅಂದರೆ ತಾಯಿ ಕಾರ್ಡ್, ಆಧಾರ ಕಾರ್ಡ್, ಪಡಿತರ ಚೀಟಿ ಇತರೆ ದಾಖಲೆಗಳು ಇಲ್ಲದೇ ಇದ್ದರೂ ಸಹ ತುರ್ತು ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆಯನ್ನು ನೀಡುವುದು ಆಸ್ಪತ್ರೆಗಳ/ಆರೋಗ್ಯ, ಕೇಂದ್ರಗಳ ಆದ್ಯ ಕರ್ತವ್ಯವಾಗಿರುತ್ತದೆ. ಈ ಅಂಶವನ್ನು ಆರೋಗ್ಯ ಇಲಾಖೆಯು ಮತ್ತೊಮ್ಮೆ ಪುನರುಚ್ಚರಿಸಿದೆ.
ಇಂತಹ ಘಟನೆಯು ಮುಂದಿನ ದಿನಗಳಲ್ಲಿ ಮರುಕಳಿಸಿದಲ್ಲಿ ಇಲಾಖೆಯು ಸಂಬಂಧಪಟ್ಟ ಅಧಿಕಾರಿ/ನೌಕರರನ್ನು ಸೇವೆಯಿಂದ ವಜಾಗೊಳಿಸುವುದಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಚ್ಚರಿಸಿದ್ದಾರೆ.
ವರದಿ: ಮಂಜುಸ್ವಾಮಿ.ಎಂ.ಎನ್. ತುಮಕೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz