ಕಾಂತಾರ ಸಿನಿಮಾ ಸಕ್ಸಸ್, ನಿರ್ದೇಶಕ ಹಾಗೂ ನಿರ್ಮಾಪಕರು ಮರುಚಿಂತಿಸುವಂತೆ ಮಾಡಿದೆ ಎಂದು ಖ್ಯಾತ ನಿರ್ದೇಶಕ ರಾಜಮೌಳಿ ಹೇಳಿದ್ದಾರೆ. ಕಾಂತಾರ ಸಕ್ಸಸ್ ಬಗ್ಗೆ ಮೊದಲ ಬಾರಿಗೆ ಮಾತನಾಡಿರುವ ರಾಜಮೌಳಿ, ಕಾಂತಾರ ಗಳಿಕೆ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಹೆಚ್ಚು ಹಣ ಗಳಿಸಲು ಬಿಗ್ ಬಜೆಟ್ ಸಿನಿಮಾವನ್ನೇ ಮಾಡಬೇಕಿಲ್ಲ. ಕಡಿಮೆ ಬಜೆಟ್‌ನ, ಒಳ್ಳೆಯ ಫ್ಲ್ಯಾನ್ ಇರುವ ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡಬಹುದು. ಇದಕ್ಕೆ ಕಾಂತಾರ ಉತ್ತಮ ಉದಾಹರಣೆ ಎಂದು ರಾಜಮೌಳಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರೇಕ್ಷಕರಿಗೆ ಇದು ಎಕ್ಸಾಯಿಟ್ ಆಗಿರುತ್ತದೆ. ಆದರೆ ನಿರ್ದೇಶಕರಾಗಿ ನಾವು ಏನು ಮಾಡುತ್ತೀವಿ ಅಂತ ಮರುಚಿಂತಿಸಬೇಕಾಗಿದೆ’ ಎಂದು ಹೇಳಿದರು.
ರಾಜಮೌಳಿ ಹೆಚ್ಚಾಗಿ ಬಿಗ್ ಬಜೆಟ್ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡವರು. ಇದೀಗ ಕಡಿಮೆ ಬಜೆಟ್ ನ ಸಿನಿಮಾಗಳು ಭರ್ಜರಿ ಕಲೆಕ್ಷನ್ ಮಾಡಿ ಬೀಗುತ್ತಿರುವ ರೀತಿ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಕ್ಸಸ್ ಸಿನಿಮಾ ತಂತ್ರದ ಬಗ್ಗೆ ಮರುಚಿಂತಿಸುವಂತೆ ಮಾಡಿದೆ ಎಂದು ರಾಜಮೌಳಿ ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


