nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ

    February 7, 2026

    ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    February 7, 2026

    ತೆಂಗಿನ ಮರ ಏರಿ ಕುಳಿತ ಚಿರತೆ; ಆತಂಕದಲ್ಲಿ ಗ್ರಾಮಸ್ಥರು

    February 7, 2026
    Facebook Twitter Instagram
    ಟ್ರೆಂಡಿಂಗ್
    • ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ
    • ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?
    • ತೆಂಗಿನ ಮರ ಏರಿ ಕುಳಿತ ಚಿರತೆ; ಆತಂಕದಲ್ಲಿ ಗ್ರಾಮಸ್ಥರು
    • ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ?: ಡಿಕೆಶಿ ವ್ಯಂಗ್ಯ
    • ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!
    • ಮೂರ್ಖ ಬಲಿದಾನ: ನೊಂದು ಬೆಂದ ಸನ್ಯಾಸಿಯ ಕಥೆ | ಜೀವನಕ್ಕೊಂದು ಅದ್ಭುತ ಸಂದೇಶ
    • ಸೇಂದಿ ಮಾರಾಟಕ್ಕೆ ಅವಕಾಶ ಕೊಡಿ: ಪ್ರಣವಾನಂದ ಸ್ವಾಮೀಜಿ ಒತ್ತಾಯ!
    • ಸಂಸ್ಕೃತಿಯನ್ನು ಗೌರವಿಸುವ ಧಾರ್ಮಿಕ ಹಬ್ಬಗಳು ಹೆಚ್ಚು ನಡೆಯಬೇಕು: ಪಿ.ಎನ್‌.ಕೃಷ್ಣಮೂರ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪಾವಗಡ: ಕರವಸೂಲಿ ನೌಕರ ಜಿ.ಮಂಜುನಾಥ್ ಅಮಾನತಿಗೆ ಒತ್ತಾಯ
    ಪಾವಗಡ June 1, 2022

    ಪಾವಗಡ: ಕರವಸೂಲಿ ನೌಕರ ಜಿ.ಮಂಜುನಾಥ್ ಅಮಾನತಿಗೆ ಒತ್ತಾಯ

    By adminJune 1, 2022No Comments2 Mins Read
    pawagadha

    ಪಾವಗಡ: ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಹೊರಗುತ್ತಿಗೆ ಕರವಸೂಲಿ ನೌಕರ ಜಿ.ಮಂಜುನಾಥ್ ಅವರನ್ನು ಅಮಾನತುಗೊಳಿಸಬೇಕು ಎಂದು ತಾಲೂಕಿನ ವೈ .ಎನ್. ಹೊಸಕೋಟೆ ಹೋಬಳಿ ಪೋತಗಾನಹಳ್ಳಿ ಗ್ರಾ.ಪಂ. ಮಾಜಿ ಉಪಾಧ್ಯಕ್ಷರಾದ ಮಾಧವ ರಾಜ್ ಒತ್ತಾಯಿಸಿದ್ದಾರೆ.

    ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,   ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಹೊರಗುತ್ತಿಗೆ ಕರವಸೂಲಿ ನೌಕರ ಜಿ.ಮಂಜುನಾಥ್ ರವರು ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಅವ್ಯವಹಾರದಲ್ಲಿ ಭಾಗಿಯಾಗಿ ತಮ್ಮ ಸ್ವಂತ ಖಾತೆಗೆ ಹಣ ಹಾಕಿಕೊಂಡು  ಲೋಕಾಯುಕ್ತ ತನಿಖೆ ವೇಳೆ ಸಿಕ್ಕಿಬಿದ್ದಿದ್ದರು.  ಈ ಪ್ರಕರಣ ನ್ಯಾಯಾಲಯದಲ್ಲಿ 2015ರಲ್ಲಿ ಕೇಸ್ ದಾಖಲಾಗಿದ್ದು , ಕೇಸ್ ದಾಖಲಾದ ನಂತರ ದಿನಾಂಕ 7:10 2015ರಂದು ಅವರನ್ನು ಗ್ರಾಮ ಪಂಚಾಯಿತಿಯಿಂದ ಬಿಡುಗಡೆಗೊಳಿಸಿದ್ದರು. ಆದರೆ ಆನಂತರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಮಂಜುನಾಥ್ ಅವರನ್ನು ಕೊಡಮಡಗು ಗ್ರಾಮ ಪಂಚಾಯಿತಿಯ ಕರವಸೂಲಿಗಾರ ರಾಗಿ ನೇಮಿಸಿದ್ದರು ಎಂದರು.


    Provided by
    Provided by

    2021ರಲ್ಲಿ ಮತ್ತೆ ರಾಜಕೀಯ ಪ್ರಭಾವ ಬೆಳೆಸಿ, ಪೋತಗಾನಹಳ್ಳಿ ಹಳ್ಳಿ ಗ್ರಾಮ ಪಂಚಾಯಿತಿಗೆ ಅವರು ಮರು ಆದೇಶದೊಂದಿಗೆ ವಾಪಸ್ ಆಗಿದ್ದು,  ಲೋಕಾಯುಕ್ತ ನ್ಯಾಯಾಲಯದಲ್ಲಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಕರವಸೂಲಿಗಾರ ಅದೇ ಗ್ರಾಮ ಪಂಚಾಯಿತಿಗೆ ವಾಪಸಾಗಿರುವುದರಿಂದ ಸಾಕ್ಷ್ಯಗಳನ್ನು ನಾಶ ಮಾಡುತ್ತಿದ್ದಾರೆ. ಆದ್ದರಿಂದ ಕೊಡಮಡಗು ಗ್ರಾಮ ಪಂಚಾಯಿತಿಯಿಂದ ಹೊರಗುತ್ತಿಗೆ ಕರವಸೂಲಿಗಾರನ್ನು  ಗ್ರಾಮ ಪಂಚಾಯಿತಿಯಿಂದ ಹೊರ ಹಾಕಬೇಕೆಂದು ಮಾಧವ ರಾಜ್ ಒತ್ತಾಯಿಸಿದ್ದಾರೆ

    ಮುಖಂಡರಾದ ಪಾತಣ್ಣ ಮಾತನಾಡಿ, ಗ್ರಾಮ ಪಂಚಾಯಿತಿಯ ಕರವಸೂಲಿಗಾರ ಜಿ. ಮಂಜುನಾಥ ಗ್ರಾಮ ಪಂಚಾಯಿತಿಯಲ್ಲಿ ಸರಿಯಾಗಿ ಕರ್ತವ್ಯ ನಿರ್ವಹಿಸದೆ,  ಸಾಕ್ಷಗಳನ್ನು ನಾಶಪಡಿಸಲು ಗ್ರಾಮ ಪಂಚಾಯಿತಿಗೆ ವಾಪಸ್ಸಾಗಿದ್ದಾರೆ. ಇಂತಹ ಕರವಸೂಲಿಗಾರ ರಾಜಕೀಯ ಕುಮ್ಮಕ್ಕಿನಿಂದ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ ನಡೆಸಿದ್ದು, ಲೋಕಾಯುಕ್ತ ನ್ಯಾಯಾಲಯದಲ್ಲಿ ಕೇಸ್ ಪೂರ್ಣಗೊಳ್ಳುವವರೆಗೆ ಗ್ರಾಮ ಪಂಚಾಯಿತಿಯಿಂದ ಬಿಡುಗಡೆಗೊಳಿಸಿ ಬೇರೆ ಗ್ರಾಮ ಪಂಚಾಯಿತಿಗೆ ವರ್ಗಾಯಿಸಬೇಕು ಹಾಗೂ ಗ್ರಾಮ ಪಂಚಾಯಿತಿಗೆ ವಾಪಸ್ ಆದಾಗಿನಿಂದ ಕೆಲವು ಅಕ್ರಮಗಳನ್ನು ನಡೆಸಿದ್ದು, ಅವುಗಳನ್ನು ಸಮಗ್ರ ತನಿಖೆ ನಡೆಸಬೇಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ಗೌರವ ನೀಡದೆ ಇರುವ ಕರವಸೂಲಿಗಾರ ರನ್ನು ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು

    ಪಂಚಾಯತಿಯ ಕರವಸೂಲಿಗಾರ ಜಿ. ಮಂಜುನಾಥ ಹೊರಗುತ್ತಿಗೆ ನೌಕರರಾಗಿದ್ದು ಈ ಹಿಂದೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು. ತನಿಖೆ ಹಂತದಲ್ಲಿರುತ್ತದೆ .ನನ್ನ ಅವಧಿಯಲ್ಲಿ ಕರವಸೂಲಿ ನೌಕರ ಯಾವುದೇ ಅಕ್ರಮಗಳನ್ನು ಮಾಡಿರುವುದಿಲ್ಲ ಎಂದು ಪ್ರಕರ್ಣ ಸಂಬಂಧ ಪೋತಗಾನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತರಾಯಪ್ಪ ಪ್ರತಿಕ್ರಿಯಿಸಿದ್ದಾರೆ.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುದ್ದಣ್ಣ , ರಾಮರಾಜ್,  ರಾಮಾಂಜನೇಯ , ರವಿ, ನಾಗರಾಜಪ್ಪ ಹಾಗೂ ಮುಖಂಡರಾದ ರಾಮಾಂಜಿನಪ್ಪ,  ಸಣ್ಣ ಮಾದ ಪಾತಣ್ಣ, ಮಧುರಾಜ್ ಮತ್ತಿತರರು ಭಾಗವಹಿಸಿದ್ದರು.

    ವರದಿ:  ರಾಮಪ್ಪ,  ಸಿ.ಕೆ ಪುರ, ಪಾವಗಡ


    ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.

    ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5

    admin
    • Website

    Related Posts

    ಶಿಕ್ಷಣ ವ್ಯವಸ್ಥೆಯ ನಿರ್ಲಕ್ಷ್ಯ  ದೇಶ—ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ: ಬರಗೂರು ರಾಮಚಂದ್ರಪ್ಪ

    February 5, 2026

    ‘ಹೆಲ್ಪ್ ಸೊಸೈಟಿ ಸೇವೆ ಅನನ್ಯ’: ಕರಿಯಮ್ಮನಪಾಳ್ಯ ಸರ್ಕಾರಿ ಶಾಲೆಗೆ ಶುದ್ಧ ನೀರಿನ ಘಟಕ ಹಸ್ತಾಂತರ

    February 4, 2026

    ಪಾವಗಡ: ಎರಡು ದಿನಗಳ ಅಂತರದಲ್ಲಿ ಎರಡು ಪೋಕ್ಸೋ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

    January 31, 2026

    Leave A Reply Cancel Reply

    Our Picks

    ಬಿಹಾರದಲ್ಲಿ ತುಮಕೂರು ಮೂಲದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವು: ಪ್ರವಾಸಕ್ಕೆ ಹೋದವರು ಹೆಣವಾಗಿ ಮರಳಿದರು!

    February 7, 2026

    ಬೆಂಗಳೂರು–ಹೈದರಾಬಾದ್ ಹೈಸ್ಪೀಡ್ ರೈಲು ಬೀದರ್ ವರೆಗೆ ವಿಸ್ತರಿಸಿ: ರೈಲ್ವೆ ಸಚಿವರಿಗೆ ದೇವೇಗೌಡರ ಮನವಿ

    February 6, 2026

    ಜೀವನದಲ್ಲಿ ಕೊನೆಯ ಹಂತದಲ್ಲಿದ್ದೇನೆ, ನೀರಾವರಿ ಯೋಜನೆಗಳಿಗೆ ಅನುಮೋದನೆ ಕೊಡಿ: ಹೆಚ್.ಡಿ. ದೇವೇಗೌಡ ಗದ್ಗದಿತ

    February 5, 2026

    ದೈಹಿಕ ಸಂಬಂಧದಲ್ಲಿ ತೃಪ್ತಿಯಿಲ್ಲ: ಮದುವೆಯಾದ ಒಂದೇ ತಿಂಗಳಲ್ಲಿ ಗಂಡನನ್ನು ತೊರೆದ ಪತ್ನಿ!

    February 3, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸೈಬರ್ ಮೋಸದ ಜಾಲವನ್ನು ಭೇದಿಸಿದ ತುಮಕೂರು ಪೊಲೀಸರು: ಇಬ್ಬರು ಆರೋಪಿಗಳ ಬಂಧನ

    February 7, 2026

    ತುಮಕೂರು: ಸಬ್ಸಿಡಿ ರೂಪದಲ್ಲಿ ಸಾಲ ನೀಡುವುದಾಗಿ ಜನರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ದೊಡ್ಡ ಜಾಲವೊಂದನ್ನು ತುಮಕೂರು ನಗರದ ಸೈಬರ್…

    ಮುಂದಿನ ಚುನಾವಣೆಯಲ್ಲೂ ಜೆಡಿಎಸ್–ಬಿಜೆಪಿ ಮೈತ್ರಿ ಮುಂದುವರಿಯುತ್ತಾ?: ಬಿ.ಎಸ್.ಯಡಿಯೂರಪ್ಪ ಹೇಳಿದ್ದೇನು?

    February 7, 2026

    ತೆಂಗಿನ ಮರ ಏರಿ ಕುಳಿತ ಚಿರತೆ; ಆತಂಕದಲ್ಲಿ ಗ್ರಾಮಸ್ಥರು

    February 7, 2026

    ಯತೀಂದ್ರ ನಮ್ಮ ಹೈಕಮಾಂಡ್, ಅವರು ಹೇಳಿದ ಮೇಲೆ ಇನ್ನೇನಿದೆ?: ಡಿಕೆಶಿ ವ್ಯಂಗ್ಯ

    February 7, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.