ಪಾವಗಡ: ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಒತ್ತಾಯಿಸಿ ಪಾವಗಡ ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಿಸಿ ಪಟ್ಟಣದ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ಕನ್ನಡ ನಾಮಫಲಕ ಬಳಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಸೂಚನೆ ನೀಡಿತು.
ಬಳಿಕ ಗ್ರೇಟ್ 2 ತಹಶೀಲ್ದಾರ್ ನರಸಿಂಹಮೂರ್ತಿ ರವರಿಗೆ ಮನವಿ ಪತ್ರ ಸಲ್ಲಿಸಿ ಕಡ್ಡಾಯ ಕನ್ನಡ ನಾಮಫಲಕ ಹಾಕಿಸಲು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷರಾದ ಸಂಗಮ್ ಅಂಗಡಿ ಮಾಲೀಕರಾದ ನರಸೀ ಪಾಟೀಲ್, ಪದಾಧಿಕಾರಿಗಳಾದ ಪಾಳೆಗಾರ್ ಲೋಕೇಶ್, ರಂಗನಾಯಕ, ಮಣಿ, ರಾಜು, ಪ್ರಶಾಂತ್, ಲಚ್ಚಿ, ಮಂಜು, ಜೆ.ಆರ್.ಶ್ರೀನಿವಾಸ್, ನಾಗಲಮಡಿಕೆ ಮಲ್ಲಿಕಾರ್ಜುನ, ಕುಮಾರ್, ಗೋಪಾಲ್, ನಾಗೇಂದ್ರ ಚಂದ್ರು, ಮುಂತಾದವರು ಭಾಗವಹಿಸಿದ್ದರು.
ವರದಿ: ಮಲ್ಲಿಕಾರ್ಜುನ್ ನಾಗಲಮಡಿಕೆ


