ಉಡುಪಿ : ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ಕ್ಷೇತ್ರಗಳಲ್ಲಿ ಪ್ರವಾಸ ನಡೆಸಿ ಕಾರ್ಯಕರ್ತರು ಸಲ್ಲಿಸಿದ ವರದಿ ಬಳಿಕ ಅಂತಿಮವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.ಕ್ಷೇತ್ರಕ್ಕೆ 7-8 ಬಾರಿ ಭೇಟಿ ನೀಡಿದ್ದೇನೆ. ಜನರು ಬೆಂಬಲ ನೀಡಿದ್ದಾರೆ. ಹೀಗಾಗಿ ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದರು.
ನಾನು ಬಿಜೆಪಿ ಸಿದ್ಧಾಂತ ವಿರೋಧಿ ಅಲ್ಲ. ಬಿಜೆಪಿಯ ಕೆಲ ವ್ಯಕ್ತಿಗಳು, ಅವರ ತತ್ವ, ಸಿದ್ಧಾಂತದ ವಿರುದ್ಧ ಹೋರಾಟ. ಹಿಂದುತ್ವದ ಪ್ರಮಾಣಿಕತೆ ಇದ್ದರೆ ಬಿಜೆಪಿಯಿಂದ ನನಗೆ ಬೆಂಬಲಿಸಲಿ ಎಂದು ಹೇಳಿದ್ದಾರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


