ಸಿನಿಮಾ ಕಾರ್ಮಿಕರಿಗಾಗಿ ಚಿರಂಜೀವಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದಾರೆ, ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಚಲನಚಿತ್ರ ಕಾರ್ಮಿಕರಿಗೆ ಈ ಘೋಷಣೆ ಮಾಡಿದರು. ಇತ್ತೀಚೆಗೆ ಚಿರು ಸೆಲೆಬ್ರಿಟಿ ಕ್ರಿಕೆಟ್ ಕಾರ್ನಿವಲ್ ಜೆರ್ಸಿಯನ್ನು ಅನಾವರಣಗೊಳಿಸಿದ್ದರು.
ಈ ಜೆರ್ಸಿ ಲಾಂಚ್ ಕಾರ್ಯಕ್ರಮದಲ್ಲಿ ಚಿತ್ರಪುರಿ ಕಾಲೋನಿಯಲ್ಲಿ ಚಲನಚಿತ್ರ ಕಾರ್ಮಿಕರು ಮತ್ತು ದಿನಗೂಲಿ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಿಸುವುದಾಗಿ ಚಿರು ಘೋಷಿಸಿದರು.
ಆಸ್ಪತ್ರೆಯ ಯೋಜನೆಯೂ ಪೂರ್ಣಗೊಂಡಿದೆ ಎಂದ ಅವರು, ತಮ್ಮ ತಂದೆ ಕೊನಿಡೇಲ ವೆಂಕಟ್ ರಾವ್ ಅವರ ಹೆಸರಿನಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲು ಬಯಸುವುದಾಗಿ ತಿಳಿಸಿದರು. ಈ ಜನ್ಮದಿನದಂದು ಶಂಕುಸ್ಥಾಪನೆ ನೆರವೇರಿಸಿ ಮುಂದಿನ ಜನ್ಮದಿನಕ್ಕೂ ಮುನ್ನ ಸೇವೆಗಳನ್ನು ಆರಂಭಿಸಲಾಗುವುದು ಎಂದರು.
ಸದ್ಯ ಮೋಹನ್ ರಾಜಾ ನಿರ್ದೇಶನದಲ್ಲಿ ‘ಗಾಡ್ ಫಾದರ್’ಚಿತ್ರದಲ್ಲಿ ಚಿರಂಜೀವಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಅಂತಿಮ ಹಂತದಲ್ಲಿರುವ ಈ ಚಿತ್ರ ದಸರಾ ಉಡುಗೊರೆಯಾಗಿ ಅಕ್ಟೋಬರ್ 5 ರಂದು ತೆರೆಗೆ ಬರಲಿದೆ. ಈ ಚಿತ್ರದ ಟೀಸರ್ ಆಗಸ್ಟ್ 21 ರಂದು ಬಿಡುಗಡೆಯಾಗಲಿದೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz