ಮಾಜಿ ಸಚಿವ ಹಾಗೂ ಹಾಲಿ ವಿಧಾನಸಭಾ ಸದಸ್ಯ ಶ್ರೀ ಸುರೇಶ ಕುಮಾರ್ ಅವರು ಕರ್ನಾಟಕ ಬಜೆಟ್ ಬಗ್ಗೆ ವಿಶ್ಲೇಷಿಸಿದ್ದಾರೆ.
ಸಿದ್ದರಾಮಯ್ಯನವರೇ, ವಿಧಾನಸಭಾ ಚುನಾವಣೆ ಮುಗಿದು 58 ದಿನಗಳು ಕಳೆದಿವೆ. ಆದರೆ, ನಿಮ್ಮ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ’ ಅಪಪ್ರಚಾರದ ಗುಂಗಿನಿಂದ ಇನ್ನೂ ಹೊರಗೆ ಬಂದಿಲ್ಲ ಎಂಬುದು ಇಂದಿನ ನಿಮ್ಮ ಮುಂಗಡ ಪತ್ರ ಭಾಷಣದಿಂದ ಸ್ಪಷ್ಟವಾಗಿದೆ. ಇಂದು ಮಂಡಿಸಲಾಗಿರುವ ಮುಂಗಡ ಪತ್ರ ಬಜೆಟ್ ಭಾಷಣ ಎನ್ನುವುದಕ್ಕಿಂತ ಚುನಾವಣಾ ರಾಜಕೀಯ ಪ್ರಚಾರ ಭಾಷಣವಾಗಿದೆ. ಹಿಂದಿನ ಸರ್ಕಾರವನ್ನು ಹಳಿಯುವುದರಲ್ಲಿ, ಹಿಂದಿನ ಆಡಳಿತವನ್ನು ಟೀಕಿಸುವುದರಲ್ಲಿ, ಡಬಲ್ ಇಂಜಿನ್ ಸರ್ಕಾರವನ್ನು ವ್ಯಂಗ್ಯ ಮಾಡುವುದರಲ್ಲಿ ಈ ಮುಂಗಡಪತ್ರ ತನ್ನ ಶೇಕಡಾ 60 ಕ್ಕೂ ಹೆಚ್ಚು ಭಾಗವನ್ನು ಮೀಸಲಿಟ್ಟಿದೆ.
ರಾಜ್ಯದ ನಾಗರಿಕರಿಗೆ ಸ್ಪಷ್ಟವಾಗಿ ತಾನು ಏನು ಮಾಡುತ್ತೇನೆ ಎಂದು ಹೇಳುವುದರ ಬದಲಿಗೆ ತನ್ನ ಕಹಿ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿಯೇ ಈ ಮುಂಗಡಪತ್ರ ಆನಂದ ಪಡುವಂತಿದೆ. ಕೇವಲ ಮೋದಿಯವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಚಿತವಾಯಿತು ಎಂಬ ಒಂದೇ ಕಾರಣದಿಂದ ಬೇರೆ ಬೇರೆ ನೆಪವೊಡ್ಡಿ ರಾಷ್ಟ್ರೀಯ ಶಿಕ್ಷಣ ನೀತಿಗೆ ತಿಲಾಂಜಲಿ ಹೇಳ ಹೊರಟಿರುವುದು ಖಂಡನೀಯ. ಅದು ತರ್ಕಹೀನ ನಿಲುವು, ರಾಷ್ಟ್ರೀಯ ಶಿಕ್ಷಣ ನೀತಿಯ ಒಳ್ಳೆಯ ಅಂಶಗಳನ್ನು ಒಪ್ಪಿಕೊಳ್ಳದಿರುವುದು ಖೇದಕರ ಎಂದಿದ್ದಾರೆ.
ಪಠ್ಯಕ್ರಮ ವ್ಯವಸ್ಥೆ ಎನ್ನುವುದು ಒಂದಿರುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಅಂತ ಇದೆ. ಅದಕ್ಕೆ ಅನುಗುಣವಾಗಿ ಪರಾಮರ್ಶೆಗೊಳಗಾಗುತ್ತಿರುತ್ತದೆ. ರಚನೆಯಾಗಬೇಕಿರುತ್ತದೆ. ಅದರ ರಾಜ್ಯ ಪಠ್ಯಕ್ರಮಗಳು ನಿರಂತರವಾಗಿ ಅದರ ಆಧಾರದಲ್ಲಿಯೇ ಪಠ್ಯವಸ್ತುಗಳು ಆಧಾರದಲ್ಲೇ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತದೆ. ಅದರಲ್ಲಿನ ವ್ಯವಸ್ಥೆಯನ್ನು ಯಾವುದೇ ನೀತಿ ನಿರೂಪಕರು ಗೌರವಿಸಬೇಕಾಗುತ್ತದೆ ಎನ್ನುವುದನ್ನು ಆಡಳಿತ ಪಕ್ಷ ನೆನಪಿನಲ್ಲಿಡಬೇಕು ಎಂದರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IHoly2pCaZPEkuV6RjAGNC
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


