ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ 2022-23ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಗೆ ಪ್ರಥಮ ವರ್ಷದ ಪ್ರವೇಶಾತಿ ಪ್ರಾರಂಭವಾಗಿದೆ.
“ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ”. ಕೆಎಸ್ ಒಯು ವಿಶ್ವವಿದ್ಯಾಲಯ ಧನಸಹಾಯ ಅಯೋಗದ (UGC) ಮಾನ್ಯತೆ ಪಡೆದಿದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಶಯ ಎಲ್ಲರಿಗೂ ಎಲ್ಲೆಡೆ ಶಿಕ್ಷಣ ಎಂಬುದು, ಅದರ ಅನ್ವಯ ಕೆಲಸದ ಜೊತೆ ಶಿಕ್ಷಣ ಪಡೆಯಬೇಕೆಂಬ ಆಸೆಯಿರುವ ವ್ಯಕ್ತಿಗಳಿಗೆ ಅನುಕೂಲಕರವಾಗುವಂತೆ ಕೆಲಸದ ನಡುವೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗದಿರುವವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಪದವಿಗಳನ್ನು ಪಡೆದುಕೊಳ್ಳಬಹುದು.
ಯುಜಿಸಿ ನಿಯಮಾವಳಿ ಪ್ರಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ನೀಡುವ ಪದವಿಗಳು ರೆಗ್ಯುಲರ್ ಮೂಲಕ ನೀಡುವ ಪದವಿಗಳು ಎರಡು ಒಂದೇ ಸಮನಾದ ಅರ್ಹತೆ ಇರುತ್ತದೆ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಕ್ತ 2022-23ನೇ (ಜುಲೈ ಆವೃತ್ತಿ) ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಸ್ನಾತಕ/ ಸ್ನಾತಕೋತ್ತರ ಕೋರ್ಸ್ ಗಳಾದ B.A.,/B Com/B.B.A/B.C.A/B.Sc (General, IT, Home Science)/BLibISc., M.A/MCJ., MCom (Dual Specialization- 1. Accounting & Finance/HRM
Marketing Management & HRM/Finance) ಎಂ.ಬಿ.ಎ ( AICTE Approved) (Specialization –
•Finance • HRM • Marketing Management • Operations • Tourism • Corporate Law • Information Technology), MLibISc., M.Sc., PG Diploma., Diploma., Certificate Programs ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ.
B.Ed – CET ಮುಖಾಂತರ ಮಾತ್ರ ಪ್ರವೇಶಾತಿ.
ಯುಜಿಸಿ ನಿಯಮಾವಳಿ ಪ್ರಕಾರ ವಿದ್ಯಾರ್ಥಿಗಳು ಎರಡು ಡಿಗ್ರಿ ಪ್ರೋಗ್ರಾಮ್ ಗಳನ್ನು ಒಂದೇ ವೇಳೆ (ಒಂದೇ ವರ್ಷ) ಓದಬಹುದು. ಒಂದು ಕೋರ್ಸ್ ರೆಗ್ಯುಲರ್ ಆಗಿದ್ದು, ಮತ್ತೊಂದು ಮುಕ್ತ ಮತ್ತು ಡಿಸ್ ಟ್ಯಾನ್ಸ್ ಲರ್ನಿಂಗ್ ಕೋರ್ಸ್(ODL) / ಆನ್ ಲೈನ್ ಮೋಡ್ ನಲ್ಲಿ ಇರಬಹುದು. ಅಥವಾ ಎರಡು ಕೋರ್ಸ್‌ಗಳು ಸಹ ODL / ಆನ್‌ಲೈನ್ ಪ್ರೋಗ್ರಾಮ್ಸ್‌ಗಳು ಆಗಿರಬಹುದು.
ಇತರ ಕಾಲೇಜಿನಲ್ಲಿ ಅಥವಾ Regular ಆಗಿ ಓದುತ್ತಿರುವ ವಿದ್ಯಾರ್ಥಿಗಳು ಮೊದಲ ವರ್ಷ ವ್ಯಾಸಂಗ ಮಾಡಿ ಕಾರಣಾಂತರಗಳಿಂದ ಓದಲು ಆಗದಿದ್ದರೆ ಅಥವಾ Regular ಆಗಿ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಅರ್ಹತಾ ಮಾನದಂಡಗಳನ್ನು ಪೂರೈಸಿ 2ನೇ ಮತ್ತು 3ನೇ ವರ್ಷಕ್ಕೆ ಮುಕ್ತ ವಿವಿಯಲ್ಲಿ ಲ್ಯಾಟರಲ್ ಪ್ರವೇಶ ಅಥವಾ ನೇರ ಪ್ರವೇಶ ಆಯ್ಕೆ ಮಾಡಿಕೊಂಡು ವಿದ್ಯಾಭ್ಯಾಸ ಮುಂದುವರಿಸಬಹುದು.
ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರವೇಶಾತಿ ಸಂದರ್ಭದಲ್ಲಿ ಮಾತ್ರ ಸರ್ಕಾರಿ ರಜಾ ದಿನಗಳಾದ ಭಾನುವಾರ ಮತ್ತು 2ನೇ ಹಾಗೂ 4ನೇ ಶನಿವಾರ ಕಛೇರಿ ತೆರೆಯುವ ಮೂಲಕ ಪ್ರವೇಶಾತಿ ಮಾಡಿಕೊಳ್ಳಲಾಗುವುದು.
ಈ ಮೇಲ್ಕಂಡ ಕೋರ್ಸ್ ಗಳ ಪ್ರಥಮ ವರ್ಷದ ಪ್ರವೇಶಾತಿಗೆ ಪ್ರಾರಂಭ ದಿನಾಂಕ- 17/01/2023.
ಕೊನೆಯ ದಿನಾಂಕ: 2022-23ನೇ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯ ಪ್ರಥಮ ವರ್ಷದ ಪ್ರವೇಶಾತಿಗೆ 2023ರ ಮಾರ್ಚ್ 31 ಕೊನೆಯ ದಿನಾಂಕ.
ಬೋಧನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ:
- ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ 15% ಭೋಧನ ಶುಲ್ಕದಲ್ಲಿ ರಿಯಾಯಿತಿ.
- ಡಿಫೆನ್ಸ್ / ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ 15% ಭೋಧನ ಶುಲ್ಕದಲ್ಲಿ ರಿಯಾಯಿತಿ.
- ಅಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ 30% ಭೋಧನ ಶುಲ್ಕದಲ್ಲಿ ರಿಯಾಯಿತಿ.
- KSRTC/BMTC/NWKSRTC/KKSRTC ನೌಕರರಿಗೆ 25% ಭೋಧನ ಶುಲ್ಕದಲ್ಲಿ ರಿಯಾಯಿತಿ.
ಉಚಿತ ಪ್ರವೇಶಾತಿ:
- ಕೋವಿಡ್ ನಿಂದ ಮರಣ ಹೊಂದಿದ ಪೋಷಕ ಮಕ್ಕಳಿಗೆ
- ಟ್ರಾನ್ಸ್ ಜೆಂಡರ್ / ತೃತೀಯ ಲಿಂಗಿಗಳಿಗೆ
- ದೃಷ್ಟಿ ಹೀನ ವಿದ್ಯಾರ್ಥಿಗಳಿಗೆ (ಬಿ.ಎಡ್/ಎಂಸಿಎ ಹೊರತು ಪಡಿಸಿ).
ಸೂಚನೆ: SC/ST/OBC ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ SSP ಮುಖಾಂತರ ವಿದ್ಯಾರ್ಥಿ ವೇತನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ:
ಡಾ. ಲೋಕೇಶ ಆರ್ ,
ಪ್ರಾದೇಶಿಕ ನಿರ್ದೇಶಕರು,
ಕರಾಮುವಿ ತುಮಕೂರು ಪ್ರಾದೇಶಿಕ ಕೇಂದ್ರ,
ಸಿಎ-07, ಟೂಡಾ ಲೇಔಟ್, ರಾಜೀವ್ ಗಾಂಧಿ ನಗರ, ಮೇಳೆಕೋಟೆ, ಗಂಗಸಂದ್ರ ಮುಖ್ಯ ರಸ್ತೆ,
ತುಮಕೂರು-572 105.
ಫೋನ್: 0816-2955580. ಮೊಬೈಲ್ 9844506629ನ್ನು ಸಂಪರ್ಕಿಸಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


