ಕರ್ನಾಟಕ ರಣಧೀರರ ವೇದಿಕೆಯ ಯಾದಗಿರಿ ಜಿಲ್ಲಾ ಮತ್ತು ಸುರಪುರ ತಾಲೂಕು ಘಟಕಗಳ ಉದ್ಘಾಟನೆ ಕಾರ್ಯಕ್ರಮವನ್ನು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್. ಶಂಕರ್ ಗೌಡ್ರು ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಿದರು.
ಯಾದಗಿರಿ ಜಿಲ್ಲಾ ನೂತನ ಜಿಲ್ಲಾಧ್ಯಕ್ಷ ದೇವರಾಜ್ ಮತ್ತು ಸುರಪುರ ತಾಲೂಕು ನೂತನ ಅಧ್ಯಕ್ಷರಾದ ಮಂಜುನಾಥ್ ಅಂಗಡಿರವರಿಗೆ ಗುರುತಿನ ಚೀಟಿ ಮತ್ತು ನೇಮಕಾತಿ ಆದೇಶ ಪತ್ರ ನೀಡಿ ಅಧಿಕಾರ ನೀಡಿದರು.
ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ನೂತನ ಕಾರ್ಯಕರ್ತರಿಗೆ ನೇಮಕಾತಿ ಆದೇಶ ಪತ್ರದೊಂದಿಗೆ ಗುರುತಿನ ಚೀಟಿಯನ್ನ ನೀಡಿ ಜವಾಬ್ದಾರಿ ನೀಡಿದರು.
ಕಾರ್ಯಕ್ರಮವನ್ನ ಉದ್ದೇಶಿಸಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ.ಆರ್.ಶಂಕರ್ ಗೌಡ್ರು, ಶ್ರಾವಣ ಕುಮಾರ್ ನಾಯಕ್, ಕೃಷ್ಣ ಮಂಗ್ಯಾ, ಕೊರಟಗೆರೆ ತಾಲೂಕು ಅಧ್ಯಕ್ಷ ಮಂಜುಸ್ವಾಮಿ ಎಂ.ಎನ್. ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಜಾಲತಾಣ ಅಧ್ಯಕ್ಷ ಬೈರಣ್ಣ,ಜಂಟಿ ಕಾರ್ಯದರ್ಶಿ ಮಹೇಶ್ ಗೌಡ, ನೆಲಮಂಗಲ ತಾಲೂಕು ಅಧ್ಯಕ್ಷ ಮೂರ್ತಿ, ಕಲ್ಯಾಣ ಕರ್ನಾಟಕ ವಿಭಾಗ ಅಧ್ಯಕ್ಷ ಬಸವರಾಜ್, ನೆಲಮಂಗಲ ತಾಲ್ಲೂಕಿನ ಜಂಟಿ ಕಾರ್ಯದರ್ಶಿ ರಮೇಶ್, ಕಾರ್ಯಕರ್ತರಾದ ನವೀನ್ ಮತ್ತು ರೈತಪರ ಸಂಘಟನೆಯ ತಾಲ್ಲೂಕು ಅಧ್ಯಕ್ಷರಾದ ಶರಣಗೌಡ ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296
ಯೂಟ್ಯೂಬ್ ಗೆ ಸಬ್ಸ್ ಕ್ರೈಬ್ ಆಗಿ: https://www.youtube.com/channel/UCtrQuDOToxHu8dzMaHjoYXA


