ಬೆಳಗಾವಿ : ಶೀಘ್ರವೇ ಕರ್ನಾಟಕದ 2 ನೇ ವಂದೇ ಭಾರತ್ ರೈಲು ಬೆಂಗಳೂರು-ಬೆಳಗಾವಿಗೆ ಸಂಚಾರ ಆರಂಭವಾಗಲಿದೆ ಎನ್ನಲಾಗಿದೆ.
ಕರ್ನಾಟಕದ 2 ನೇ ವಂದೇ ಭಾರತ್ ರೈಲು ಬೆಂಗಳೂರಿನಿಂದ ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಹೊಸ ವಂದೇ ಭಾರತ್ ರೈಲು ಧಾರವಾಡಕ್ಕೂ ವಿಸ್ತರಣೆಯಾಗುವುದು ಖಚಿತ ಆಗಿದೆ.
ಹೀಗಾಗಿ ಬೆಂಗಳೂರು – ಧಾರವಾಡ ನಡುವಿನ ವಂದೇ ಭಾರತ್ ರೈಲು ಬೆಳಗಾವಿಯವರೆಗೂ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಮಾಹಿತಿ ನೀಡಿದ್ದಾರೆ.
ಶೀಘ್ರವೇ ಬೆಂಗಳೂರು-ಹುಬ್ಬಳ್ಳಿ-ಬೆಳಗಾವಿಗೆ ಕರ್ನಾಟಕದ 2 ನೇ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ರೈಲ್ವೆ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎಂದು ಹೇಳಲಾಗುತ್ತಿದೆ.


