ದೆಹಲಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರಕುಶಲ ಅಭಿವೃದ್ಧಿ ನಿಗಮ ಹಿರಿಯ ಕುಶಲಕರ್ಮಿಗಳ ಮಾರ್ಗದರ್ಶನದಲ್ಲಿ ನಿರ್ಮಿಸಿರುವ ಸ್ತಬ್ಧ ಚಿತ್ರಗಳಿಂದ ಕರ್ನಾಟಕದ ಕರಕುಶಲತೆ ದೇಶಕ್ಕೆ ಪರಿಚಯವಾಗಲಿವೆ. ಕರ್ನಾಟಕ ಕರಕುಶಲ ಅಭಿವೃದ್ದಿ ನಿಗಮದ ನೊಂದಾಯಿತ ಹಿರಿಯ ಕುಶಲಕರ್ಮಿ ಶಶಿಧರ ಅಡಪ ಅವರ ಮಾರ್ಗದರ್ಶನದಲ್ಲಿ ತಯಾರಿಸಿದ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಗುತ್ತಿದೆ.
ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಸಾಂಪ್ರದಾಯಿಕ ಕರಕುಶಲ ಕಲೆಗಳ ತೊಟ್ಟಿಲು ಕರ್ನಾಟಕ ಹೆಸರಿನ ಸ್ತಬ್ಧ ಚಿತ್ರದಲ್ಲಿ ಕಾವೇರಿ ಎಂಪೋರಿಯಂನ ಆನೆ, ಉಡುಪಿಯ ಯಕ್ಷಗಾನ ಗೊಂಬೆಗಳು, ಕಿನ್ನಾಳ ಅದ್ಭುತ ಕಲೆಯ ಆಂಜನೇಯ ಪ್ರತಿಮೆ, ಬಿದಿರಿನ ಕಲೆ, ನವಿಲಿನ ಮೂರ್ತಿ, ಬಾಗಿನ ಹಿಡಿದ ಕಮಲಾದೇವಿ ಚಟ್ಟೋಪಾಧ್ಯಾಯ ಮೂರ್ತಿ, ಉಡುಪಿಯ ಉಪ್ಪುಂದದ ಯಕ್ಷಗಾನ ಗೊಂಬೆಗಳು ಹಾಗೂ ಕಿನ್ನಾಳ ಹುಡುಗಿ, ಮೈಸೂರು ರೇಷ್ಮೆ ,ಇಳಕಲ್ ಮೊಳಕಾಲ್ಮೂರಿನ ಸೀರೆಗಳ ಬಳಕೆ, ತಾಳೆ, ಬೆತ್ತ ಬಳಸಿ ವಿಶೇಷವಾಗಿ ತಯಾರಿಸಿದ ಸಮಗ್ರತೆ ಚಿತ್ರಣ್ಲ ಪ್ರದರ್ಶನಗೊಳ್ಳಲಿವೆ.
ಕರಕುಶಲ ನಿಗಮದ ಕುಶಲಕರ್ಮಿಗಳಿಂದ ಸಿದ್ಧವಾಗಿರುವ ಈ ಸ್ತಬ್ಧಚಿತ್ರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಎಂಟಿಬಿ ನಾಗರಾಜ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ಸಂತಸ ವ್ಯಕ್ತಪಡಿಸಿ ಪ್ರೋತ್ಸಾಹಿಸಿದ್ದಾರೆ.ಕರಕುಶಲ ಅಭಿವೃದ್ಧಿ ನಿಗಮ ದೇಶದಲ್ಲಿ ಅತಿಹೆಚ್ಚು ಹೆಸರು ಮಾಡುತ್ತಿರುವ ನಿಗಮ ಎನ್ನುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ.
ಕಿನ್ನಾಳ ಕಲೆಯ ವೈಭವ ಹಾಗೂ ಚನ್ನಪಟ್ಟಣದ ಗೊಂಬೆಗಳಿಗೆ ದೇಶದ ಪ್ರಧಾನ ಮಂತ್ರಿಗಳೇ ಮೆಚ್ಚುಗೆ ಸೂಚಿಸಿದ್ದಾರೆ. ಹೀಗಾಗಿ ಈ ಬಾರಿಯ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲೂ ಮತ್ತೊಮ್ಮೆ ದೇಶಕ್ಕೆ ಕರ್ನಾಟಕ ಕರಕುಶಲ ನಿಗಮದ ಕಲೆಯ ಸೊಬಗು ಮೆರಗು ನೀಡಲಿದೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ,ಅಭಿಪ್ರಾಯಪಟ್ಟರು.ಹಿರಿಯ ಕಲಾವಿದರಾದ ಶಶಿಧರ ಅಡಪ ಅವರು ಕರಕುಶಲ ಅಭಿವೃದ್ಧಿ
ನಿಗಮದ ಕೇಂದ್ರ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಗೌರವಿಸಲಾಯಿತು.
ಸ್ತಬ್ಧಚಿತ್ರದ ಪೋಸ್ಟರ್ ನ್ನು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಅವರು ವೀಕ್ಷಣೆ ಮಾಡಿ ಸ್ತಬ್ಧಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಚರ್ಚೆ ಮಾಡಿದರು.
ವರದಿ :ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy