ರಾಜ್ಯದಲ್ಲಿ ಲಾಟರಿ ಮಾರಾಟವನ್ನು ಮರು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಲಾಟರಿ ಚಿಲ್ಲರೆ ಮಾರಾಟಗಾರರ ಸಂಘವು ಸರ್ಕಾರವನ್ನು ಒತ್ತಾಯಿಸಿದೆ. ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ, ಈಶಾನ್ಯ ರಾಜ್ಯಗಳು ಹಾಗೂ ಕೇರಳದ ಲಾಟರಿ ಟಿಕೆಟ್ ಗಳು ರಾಜ್ಯದಲ್ಲಿ ಅಕ್ರಮವಾಗಿ ಹಾಗೂ ಆನ್ ಲೈನ್ ಮುಖೇನ ನಡೆಯುತ್ತಿವೆ. ಇದನ್ನು ತಡೆಯಲು ಸರ್ಕಾರ 30 ದಿನಗಳಲ್ಲಿ ಕ್ರಮ ವಹಿಸಿ ಸಮಿತಿ ರಚಿಸಬೇಕು. ಇಲ್ಲವಾದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆಂದು ಎಚ್ಚರಿಸಿದ್ದಾರೆ.
ಕೇರಳ ಲಾಟರಿ ಟಿಕೆಟ್.. ಆನ್‌ಲೈನ್ ಹಾಗೂ ಹೊರ ರಾಜ್ಯದವರು ಖರೀದಿಸಬಹುದೇ, ಗೆದ್ದ ಹಣ ಪಡೆಯುವುದು ಹೇಗೆ?
ಕೇರಳದ ಬಂಪರ್ ಲಾಟರಿಯಲ್ಲಿ ಆಟೋ ರಿಕ್ಷಾ ಚಾಲಕ 25 ಕೋಟಿ ರೂಪಾಯಿ ಹಣ ಗೆದ್ದು ದೇಶದ ಗಮನ ಸೆಳೆದಿದ್ದಾರೆ. ಕೇರಳ ಲಾಟರಿ ಟಿಕೆಟ್‌ಗಳನ್ನು ಹೊರ ರಾಜ್ಯದವರು ಖರೀದಿಸಬಹುದೇ ಹಾಗೂ ಆನ್ಲೈನ್ನಲ್ಲಿ ಲಾಟರಿ ಟಿಕೆಟ್ ಲಭ್ಯ ಇವೆಯೇ ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತಿವೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy


