ತಿಪಟೂರು: ನಗರದ ಆರ್ ಎಂಸಿ ಯಾರ್ಡ್ ನಲ್ಲಿರುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ (ಟಿಎಪಿಸಿಎಂಎಸ್) ನ 2023-24ನೇ ಸಾಲಿನ 73ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಷಡಕ್ಷರಿ, ಸರ್ಕಾರದ ಆದೇಶದಂತೆ ಸಹಕಾರಿಯೂ ರೈತರಿಗೆ ಕೃಷಿ ಸಾಲಕ್ಕೆ ಶೂನ್ಯ ಬಡ್ಡಿ ದರ ನಿಗದಿ ಮಾಡಿ ರೈತರ ಅಭಿವೃದ್ಧಿಗೆ ಕಾರಣವಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಇಂದು ರೈತರು ತಮ್ಮ ಜಮೀನು ಅಭಿವೃದ್ಧಿಪಡಿಸಿಕೊಂಡು ಹೊಸ ಹೊಸ ಬೆಳೆಗಳನ್ನು ಬೆಳೆಯುವಲ್ಲಿ ಸಹಕಾರಿಯ ಕೊಡುಗೆ ತುಂಬಾ ದೊಡ್ಡದಿದೆ ಎಂದರು.
ಸಾಲ ಪಡೆದ ರೈತರು ಸಕಾಲದಲ್ಲಿ ಸಾಲವನ್ನು ಮರುಪಾವತಿಸಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಕಾರಣರಾಗಬೇಕು. ಸದಸ್ಯರು ಸಹಕಾರ ನೀಡಿದಾಗ ಸಂಘ ಹೆಚ್ಚಿನ ಅಭಿವೃದ್ಧಿ ಕಾಣುತ್ತದೆ. ಸಹಕಾರಿ ಸಂಘಕ್ಕೆ ಕರ್ನಾಟಕದ ಕೊಡುಗೆ ತುಂಬಾ ಗಣನೀಯವಾಗಿದ್ದು ಸಹಕಾರ ತತ್ವ ಬದುಕಿನ ಭಾಗವಾಗಬೇಕೆಂದರು.
ಈ ಕಾರ್ಯಕ್ರಮದಲ್ಲಿ ಸಹಕಾರಿ ಸದಸ್ಯ ರ ವಿದ್ಯಾರ್ಥಿಗಳಿಗೆ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕ ಪಟ್ಟ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು.
ತಾ.ಪಂ. ಮಾಜಿ ಅಧ್ಯಕ್ಷ ಸುರೇಶ್, ಸಹಕಾರಿಯ ಉಪಾಧ್ಯಕ್ಷೆ ಎಂ.ಕಾತ್ಯಾಯನಿ, ಕಾರ್ಯದರ್ಶಿ ಬಿ.ಸಿ.ಅಶೋಕ್ ಕುಮಾರ್, ನಿರ್ದೇಶಕರಾದ ರೇಣುಕಾಮೂರ್ತಿ, ಬೋರಲಿಂಗೇಗೌಡ, ಶಂಕರಮೂರ್ತಿ, ಕಾಂತರಾಜ್, ತಮ್ಮಯ್ಯ, ಯೋಗಾನಂದ ಮೂರ್ತಿ, ದಾಸಪ್ಪ, ಟಿ.ಸಿ.ಶೈಲಜಾ ಮತ್ತು ಪಿ.ಹೇಮಾ ಸೇರಿದಂತೆ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.
ವರದಿ: ಆನಂದ, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296