ತಿಪಟೂರು: ಕಾರ್ಯಕರ್ತರು ಮತ್ತು ಮುಖಂಡರು ಅಭಿಮಾನಿಗಳು ಶ್ರಮಪಟ್ಟು ನನ್ನನ್ನು ಗೆಲ್ಲಿಸಿ ಶಾಸಕನನ್ನಾಗಿ ಮಾಡಿದ್ದಾರೆ. ಆದ್ದರಿಂದ ನಾನು ಶಾಸಕನಲ್ಲ, ನಿಮ್ಮೆಲ್ಲರ ಸೇವಕನಾಗಿ ಇರಲು ಬಯಸುತ್ತೇನೆ ಎಂದು ತಿಪಟೂರು ಶಾಸಕ ಕೆ.ಷಡಕ್ಷರಿ ಹೇಳಿದರು.
ತಿಪಟೂರು ಕಾಂಗ್ರೆಸ್ ಕಾರ್ಯಕರ್ತರ ಮತ್ತು ಅಭಿಮಾನಿಗಳಿಂದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರ ಋಣ ಅಭಿಮಾನ ನನ್ನ ಮೇಲಿದೆ, ಅವರ ಸೇವೆ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಕೆಲವರು ಬೇರೆ ಬೇರೆ ಪಕ್ಷ ತ್ಯಜಿಸಿ ಕೆಲವರು ಬೇರೆ ಪಕ್ಷ ತ್ಯಜಿಸಿ ನಮ್ಮ ಪಕ್ಷಕ್ಕೆ ಬಂದು ಪ್ರಚಾರ ನಡೆಸಿದ್ದಾರೆ. ನನ್ನ ಗೆಲುವಿಗೆ ಲೋಕೇಶ್ ಅವರು ಕಾರಣರಾಗಿದ್ದಾರೆ. ನಮ್ಮ ಪಕ್ಷದಲ್ಲಿ ಲೋಕೇಶ್ವರ್ ಗುಂಪು ಷಡಕ್ಷರಿ ಗುಂಪು ಎಂಬುದಿಲ್ಲ ಕೇವಲ ಇದು ಕಾಂಗ್ರೆಸ್ ಪಕ್ಷದ ಗುಂಪು ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದರು.
ನಾನು 48ನೇ ವಯಸ್ಸಿನಲ್ಲಿ ಪ್ರಥಮವಾಗಿ ಶಾಸಕರಾಗಿ ಆಯ್ಕೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನನಗೆ ಮಂತ್ರಿ ಪದವಿ ಘೋಷಣೆಯಾಗಿ ಕೊನೆಯ ಹಂತದಲ್ಲಿ ಕೈ ತಪ್ಪಿತು. ನಾನು ಅಸಮಾಧಾನ ವ್ಯಕ್ತಪಡಿಸಲಿಲ್ಲ, ಮಾಧ್ಯಮದ ಬಳಿಯೂ ಹೋಗಲಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಶಾಶ್ವತ ಇದರ ನೆರಳಿನಲ್ಲಿ ನಾವು ನೀವು ಬೆಳೆಯಬೇಕು ಎಂದು ಶಾಸಕಕ್ಕೆ ಷರಕ್ಷರಿ ಅವರು ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಂತರಾಜು, ಮಾಜಿ ತಾಲೂಕು ಪಂಚಾಯಿತಿ ನ್ಯಾಕೇನಹಳ್ಳಿ ಸುರೇಶ್, ಆರ್.ಡಿ.ಬಾಬು ನಿಖಿಲ್ ರಾಜ್ ಅಣ್ಣಯ್ಯ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L2Uvw2cNJZO5mXqIX4WA7h
ಯೂಟ್ಯೂಬ್ ಚಾನೆಲ್ Subscribe ಮಾಡಿ: https://www.youtube.com/channel/UCtrQuDOToxHu8dzMaHjoYXA


