ಇಂದು ಬೆಳಗ್ಗೆ ಕಾಶ್‍ಮೀರ ಕಣಿವೆಯಲ್ಲಿ ಲಘು ಭೂಕಂಪ ಸಂಭವಿಸಿದೆ. ಆದರೆ, ಯಾವುದೇ ಹಾನಿ ಉಂಟಾದ ಬಗ್ಗೆ ವರದಿಯಾಗಿಲ್ಲ. ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆ ದಾಖಲಾಗಿದ್ದ ಭೂಕಂಪ ಇಂದು ಬೆಳಗ್ಗೆ ಸುಮಾರು 5.43ರಲ್ಲಿ ಸಂಭವಿಸಿತು ಎಂದು ವಿಪತ್ತು (ವಿಕೋಪ) ನಿರ್ವಹಣಾ ಪ್ರಾಕಾರದ ಅಕಾರಿಯೊಬ್ಬರು ತಿಳಿಸಿದರು.
ಜಮ್ಮು-ಕಾಶ್ಮೀರದ ಪಹಲ್ಗಾಂನ ದಕ್ಷಿಣ-ನೈಋತ್ಯಕ್ಕೆ 15ಕಿ.ಮೀ.ಗಳಷ್ಟು ದೂರದಲ್ಲಿ ಭೂಕಂಪ ಕೇಂದ್ರ ಇತ್ತು. 16 ಕಿ.ಮೀ.ಗಳಷ್ಟು ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಅವರು ನುಡಿದರು. ಪಹಲ್ಗಾಮ್ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿದೆ.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB