ತುಮಕೂರು: ಈ ಬಾರಿ ಸಣ್ಣ ಸಣ್ಣ ಸಮುದಾಯಗಳಿಗೆ ಟಿಕೇಟ್ ಕೊಡಬೇಕು ಅಂತಾ ಯೋಚನೆ ಮಾಡಿದ್ದೇವೆ. ಮುಂದಿನ ಚುನಾವಣೆಯಲ್ಲಿ ತಿಗಳ ಸಮುದಾಯದ ಇಬ್ಬರಿಗೆ ಜೆಡಿಎಸ್ ನಿಂದ ಟಿಕೇಟ್ ಕೊಡಲಾಗುವುದು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ತುಮಕೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಭ್ರಷ್ಟಾಚಾರ ಅನ್ನೋದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಸ್ವಾತಂತ್ರ್ಯ ಪೂರ್ವ ಹಾಗೂ ಸ್ವಾತಂತ್ರ್ಯ ನಂತರ ಕಮಿಷನ್ ಅನ್ನೋದು ಉಡುಗೊರೆ ರೂಪದಲ್ಲಿ ನಡೆದುಕೊಂಡು ಬಂದಿದೆ. 2008ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಅದು ಸ್ವೇಚ್ಚಾಚಾರವಾಗಿ ನಡೆಯಿತು. ಈ ಭ್ರಷ್ಟಾಚಾರವನ್ನ ಹೇಗಾದರೂ ಮಾಡಿ ನಿಲ್ಲಿಸಬೇಕು ಅನ್ನೋದರ ಬಗ್ಗೆ ಜನತೆಯೂ ಚಿಂತಿಸಿ ಸಿದ್ದರಾಗಬೇಕು ಎಂದರು.
ನಾನು ಸಿಎಂ ಆಗಿದ್ದಾಗ ಪರ್ಸೆಂಟೇಜ್ ವ್ಯವಸ್ಥೆಯನ್ನ ನಿಲ್ಲಿಸಬೇಕು ಅಂತಾ ತಯಾರಾಗಿದ್ದೆ. ವೈಯಕ್ತಿವಾಗಿ ನಾನು ತೀರ್ಮಾನ ಮಾಡಿದ್ದೆ. ನನ್ನ ಅವಧಿಯ ಮೈತ್ರಿ ಸರ್ಕಾರದಲ್ಲೂ ಕಮಿಷನ್ ದಂಧೆ ನಡೆದಿತ್ತು. ಹಾಗಂತ ಜೆಡಿಎಸ್ ಸಚಿವರು ಯಾರೂ ಕಮಿಷನ್ ತಗೊತಿರಲಿಲ್ಲ ಎಂದರು.
ಕಮಿಷನ್ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಂದ್ರೆ ಸ್ವತಂತ್ರ ಸರ್ಕಾರ ಬರಬೇಕು. ನಾನು ಸಿಎಂ ಆಗಿದ್ದಾಗ ನನ್ನ ಕಚೇರಿ ಹಾಗೂ ಸಹೋದರ ರೇವಣ್ಣ ಕಮಿಷನ್ ದಂಧೆಯಿಂದ ದೂರ ಇದ್ವಿ. ಕೆಂಪಣ್ಣ ಮಾಡುತ್ತಿರುವ ಆರೋಪ ಸುಳ್ಳಾದರೆ ಕ್ರಮ ತೆಗೆದುಕೊಳ್ಳಲಿ ಎಂದು ಸ್ವತಃ ಕೆಂಪಣ್ಣ ಹೇಳಿದ್ದಾರೆ. ಕೋರ್ಟಿಗೆ ಹೋಗಿ ಅಂತಾ ಕೆಂಪಣ್ಣ ಹೇಳಿದ್ದಾರೆ. ಅದು ಮುಂದೆ ಎಲ್ಲೆಲ್ಲಿ ಹೋಗುತ್ತೋ ಕಾದು ನೋಡೋಣ. ಪ್ರಸ್ತುತ ಬಿಜೆಪಿ ಸರ್ಕಾರದಲ್ಲಿ ಒಬ್ಬರೋ, ಇಬ್ಬರೋ ಹೊರತುಪಡಿಸಿದರೆ ಇನ್ಯಾರ ಬಗ್ಗೆಯೂ ಚರ್ಚೆ ಮಾಡೋ ಅರ್ಥ ಇಲ್ಲ ಎಂದರು.
ಜಿ.ಟಿ.ದೇವೇಗೌಡರು ಹೀಗಲೂ ಜೆ.ಡಿ.ಎಸ್ ಶಾಸಕರು, ಅವರೇನೂ ಪಕ್ಷ ಬಿಟ್ಟು ಹೋಗಿಲ್ಲ. ಮುಂದೆಯೂ ಜೆಡಿಎಸ್ ನಲ್ಲಿ ಇರುತ್ತಾರೆ ಎಂದರು.
ವರದಿ: ರಾಜೇಶ್ ರಂಗನಾಥ್
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz