ಔರಾದ್: ಬೀದರ್ ಹೆದ್ದಾರಿಯಲ್ಲಿ ಬರುವ ಕೌಠಾ ಬಿ ಗ್ರಾಮ ಪಂಚಾಯತ್ ಅಡಿಯಲ್ಲಿ ಬರುವ ಬಲೂರ್ ಜೆ ಹಾಗೂ ಕೌಠಾ ಕೆ ಗ್ರಾಮದಲ್ಲಿ ದಿನೇ ದಿನೇ ಅಪಘಾತ ಹೆಚ್ಚುತ್ತಿವೆ. ಅದನ್ನು ತಡೆಗಟ್ಟಲು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೌಠಾ ಗ್ರಾಮ ಪಂಚಾಯತ್ ವತಿಯಿಂದ ಬಲೂರ್ ಜೆ ಹಾಗೂ ಕೌಠಾ ಕೆ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಬ್ಯಾರಿಕೆಟ್ ಅಳವಡಿಸಲಾಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಕುಮಾರ್ ಘಾಟೆ ಉದ್ಘಾಟಿಸಿದರು. ಗ್ರಾಮ ಪಂಚಾಯತ್ ರವೀನಾ ಗೌತಮ್ ಮೇತ್ರೆ, ಉಪಾಧ್ಯಕ್ಷರಾದ ಪ್ರಭು ಬಳತೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ರಾಗುನಾಥ್ ರಡ್ಡಿ,ಸಂತಪುರ ಪೊಲೀಸ್ ಅಧಿಕಾರಿಗಾದ ASI ಶೇಷಾರವಾ T.A.ಕಿರಣ್ ರಾಥೋಡ್, ಸದಸ್ಯರಾದ ಪಂಡಿತ್, ದೇವರಾಜ್, ಗ್ರಾಮದ ಹಿರಿಯ ಮುಖಂಡರು ಹಾಜರಿದ್ದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC