ತುಮಕೂರು: ಕಾಯಕ ಯೋಗಿ ಪ್ರಾದೇಶಿಕ ದಿನ ಪತ್ರಿಕೆಯ 9ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ವರದಿಗಾರರಿಗೆ 2026–27 ನೇ ಸಾಲಿನ ಗುರುತಿನ ಚೀಟಿ (ಐ ಡಿ ಕಾರ್ಡ್) ಮತ್ತು ವರದಿಗಾರರ ನೇಮಕಾತಿ ಆದೇಶ ಪತ್ರ ವಿತರಣೆ ಸಮಾರಂಭವು ಸಾಂಸ್ಕೃತಿಕ ನಗರಿ ಮೈಸೂರಿನ ಪಿಡಬ್ಲ್ಯೂಡಿ ಗೆಸ್ಟ್ ಹೌಸ್ ನಲ್ಲಿ ಆಯೋಜನೆ ಮಾಡಲಾಗಿತ್ತು.
ತುಮಕೂರು ಜಿಲ್ಲಾ ವರದಿಗಾರರಾದ ಮಂಜುಸ್ವಾಮಿ ಎಂ.ಎನ್. ಅವರ ಉತ್ತಮ ವರದಿಗಾರಿಕೆಗೆ “ಕಾಯಕ ಯೋಗಿ ಪ್ರಾದೇಶಿಕ ದಿನ ಪತ್ರಿಕೆ”ಯ ಸಂಪಾದಕರಾದ ಬಿ.ಕೆ.ಅರುಣ ಜ್ಯೋತಿಯವರು ದ್ವಿತೀಯ ಪ್ರಶಸ್ತಿ ಪ್ರಕಟ ಮಾಡಿ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.
2025–26 ನೇ ಸಾಲಿನಲ್ಲಿ ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ, ಸ್ಥಳೀಯ ಸರ್ಕಾರಿ ಇಲಾಖೆಗಳ ಕಾರ್ಯ ವೈಖರಿ, ಜನೋಪಯೋಗಿ ವರದಿ, ಜಿಲ್ಲೆಯಲ್ಲಿನ ಕುಂದು ಕೊರತೆಗಳ ಬಗ್ಗೆ, ಗ್ರಾಮಿಣ ಭಾಗದ ಅಭಿವೃದ್ಧಿ ಮತ್ತು ಅನಾನುಕೂಲಗಳ ಬಗ್ಗೆ ವಿಶೇಷ ಆಸಕ್ತಿವಹಿಸಿ ಸುದ್ದಿಗಳನ್ನು ಮಾಡಿದ್ದರು. ಸಾಮಾಜಿಕ ಶೈಕ್ಷಣಿಕ ಮಾನವೀಯತೆ ಸುದ್ದಿಗಳನ್ನು ಆದರಿಸಿ “ಕಾಯಕ ಯೋಗಿ ಉತ್ತಮ ವರದಿಗಾರ” (ದ್ವಿತೀಯ ಸ್ಥಾನ) ಎಂದು ಘೋಷಣೆ ಮಾಡಿ ಪ್ರಶಸ್ತಿಯೊಂದಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಇನ್ನು ಈ ಸಂದರ್ಭದಲ್ಲಿ ಕಾಯಕ ಯೋಗಿ ಕುಟುಂಬದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ವರದಿಗಾರರು ಮಂಜುಸ್ವಾಮಿ ಎಂ.ಎನ್. ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


